ಕಳೆದ ವರ್ಷದಲ್ಲಿ ಕೇಂದ್ರ ಸರ್ಕಾರ ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಪತ್ರಿಕೆಗಳಿಗೆ ಜಾಹೀರಾತನ್ನ ನೀಡಲು ಬರೋಬ್ಬರಿ 713.20 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಆರ್ಟಿಐ ಕಾಯಕರ್ತ ಜತಿನ್ ದೇಸಾಯಿ ಜಾಹೀರಾತಿಗಾಗಿ ಮೋದಿ ಸರ್ಕಾರ ವ್ಯಯಿಸಿದ ಹಣದ ಬಗ್ಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಉತ್ತರ ನೀಡಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಔಟ್ ರೀಚ್ ಹಾಗೂ ಸಂವಹನ ಇಲಾಖೆ 2019-20ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಜಾಹೀರಾತಿಗಾಗಿ ಪ್ರತಿ ದಿನ ಸರಿಸುಮಾರು 1.95 ಕೋಟಿ ರೂಪಾಯಿ ವ್ಯಯಿಸಿದೆ ಅಂತಾ ಮಾಹಿತಿ ನೀಡಿದೆ.
ಆದರೆ ವಿದೇಶಿ ಮಾಧ್ಯಮಗಳಿಗೆ ಜಾಹೀರಾತು ನೀಡಲು ಸರ್ಕಾರ ಎಷ್ಟು ಹಣ ವ್ಯಯಿಸಿದೆ ಅನ್ನೋದ್ರ ಬಗ್ಗೆ ಈ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ. 713.20 ಕೋಟಿ ರೂಪಾಯಿಗಳಲ್ಲಿ 295.05 ಕೋಟಿ ಹಣವನ್ನ ಪತ್ರಿಕೆ ಜಾಹೀರಾತಿಗೆ ನೀಡಲಾಗಿದ್ರೆ 317.05 ಹಣವನ್ನ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ನೀಡಲಾಗಿದೆ. ಇನ್ನುಳಿದ 101.1 ಕೋಟಿಯನ್ನ ಮಾಧ್ಯಮೇತರ ಜಾಹೀರಾತಿಗಾಗಿ ವ್ಯಯಿಸಲಾಗಿದೆ.