alex Certify 13 ತಿಂಗಳ ಮಗುವಿನ ಮೂಳೆ ಮುರಿದ ಕೇರ್ ಟೇಕರ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

13 ತಿಂಗಳ ಮಗುವಿನ ಮೂಳೆ ಮುರಿದ ಕೇರ್ ಟೇಕರ್….!

ಮಗುವನ್ನು ಕೇರ್ ಟೇಕರ್ ಬಳಿ ಬಿಟ್ಟು ಶಾಪಿಂಗ್ ಗೆ ಹೋಗಿದ್ದು ತಾಯಿಗೆ ದುಬಾರಿಯಾಗಿ ಪರಿಣಮಿಸಿದೆ. ಮಗುವನ್ನು ಈಗ ವೆಂಟಿಲೇಟರ್ ನಲ್ಲಿಡಲಾಗಿದೆ. ಘಟನೆ ಗುರುಗಾಂವ್ ಸೆಕ್ಟರ್ – 56 ರ ಅಲಕಾನಂದ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. 13 ತಿಂಗಳ ಮುಗ್ಧ ಮಗುವನ್ನು ಕೇರ್ ಟೇಕರ್ ಬಳಿ ಬಿಟ್ಟು, ತಾಯಿ ಶಾಪಿಂಗ್ ಗೆ ಹೋಗಿದ್ದಳಂತೆ.

15 ವರ್ಷದ ಕೇರ್ ಟೇಕರ್ 13 ತಿಂಗಳ ಮಗುವಿಗೆ ಮನಸ್ಸಿಗೆ ಬಂದಂತೆ ಥಳಿಸಿದ್ದಾಳೆ. ಮಗುವಿನ ಪಕ್ಕೆಲುಬಿನ ನಾಲ್ಕು ಮೂಳೆಗಳು ಮುರಿದಿವೆ. ಮೂತ್ರಪಿಂಡ, ಪಿತ್ತಜನಕಾಂಗ ಮತ್ತು ಇತರ ಅಂಗಗಳಿಗೂ ಗಾಯವಾಗಿದೆ. ಅಪ್ರಾಪ್ತೆ ಮೇಲೆ ಕೊಲೆ ಯತ್ನ ಹಾಗೂ ಹಲ್ಲೆ ಪ್ರಕರಣ ದಾಖಲಾಗಿದೆ. ಅಪ್ರಾಪ್ತೆಯನ್ನು ಕೆಲಸಕ್ಕಿಟ್ಟುಕೊಂಡ ಕಾರಣ ಮಗುವಿನ ತಂದೆ ವಿರುದ್ಧವೂ ದೂರು ದಾಖಲಾಗಿದೆ. ಮಗು ಅಳು ನಿಲ್ಲಿಸದ ಕಾರಣ ಕೋಪಗೊಂಡು ಹೊಡೆದಿದ್ದೇನೆಂದು ಆಕೆ ಹೇಳಿದ್ದಾಳೆ.

ಅಪ್ರಾಪ್ತೆ ಕಳೆದ ಮೂರು ತಿಂಗಳಿಂದ ಇವರ ಮನೆಯಲ್ಲಿ ಕೆಲಸ ಮಾಡ್ತಿದ್ದಳಂತೆ. ಪ್ರತಿ ತಿಂಗಳು 9 ಸಾವಿರ ರೂಪಾಯಿ ಸಂಬಳ ನೀಡುತ್ತಿದ್ದಾರಂತೆ. ಶಾಪಿಂಗ್ ಮುಗಿಸಿ ಒಂದು ಗಂಟೆ ನಂತ್ರ ಮನೆಗೆ ಬಂದ ವೇಳೆ ಮಗು ಜೋರಾಗಿ ಅಳ್ತಿತ್ತಂತೆ. ವೈದ್ಯರ ಬಳಿ ಕರೆದುಕೊಂಡು ಹೋದಾಗ ವೈದ್ಯರು ಮಗುವಿನ ಪರಿಸ್ಥಿತಿ ಗಂಭೀರವಾಗಿದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...