alex Certify DL ಇಲ್ಲದೆ ಬೈಕ್ ಚಾಲನೆ: ಬರೋಬ್ಬರಿ 26,000 ರೂ. ದಂಡ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

DL ಇಲ್ಲದೆ ಬೈಕ್ ಚಾಲನೆ: ಬರೋಬ್ಬರಿ 26,000 ರೂ. ದಂಡ…!

ಭುವನೇಶ್ವರದ ಚಂದ್ರಶೇಖರಪುರ ಏರಿಯಾದಲ್ಲಿ ಅಪ್ರಾಪ್ತನೊಬ್ಬ ಬೈಕ್​ ಸಮೇತ ಆರ್​ಟಿಓ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ. ಡ್ರೈವಿಂಗ್​ ಲೈಸೆನ್ಸ್ ಹಾಗೂ ಹೆಲ್ಮೆಟ್​ ಇಲ್ಲದೇ ಪ್ರಯಾಣ ಮಾಡಿದ್ದ ಈತನಿಗೆ ಬರೋಬ್ಬರಿ 26 ಸಾವಿರ ರೂಪಾಯಿ ದಂಡವನ್ನ ವಿಧಿಸಲಾಗಿದೆ.

ಮೋಟಾರ್​ ವೆಹಿಕಲ್​ ಆಕ್ಟ್ 2019ರ ಅಡಿಯಲ್ಲಿ ಇಷ್ಟು ದೊಡ್ಡ ಮೊತ್ತದ ದಂಡವನ್ನ ವಿಧಿಸಲಾಗಿದೆ. ಸೆಕ್ಷನ್​ 207ರ ಅಡಿಯಲ್ಲಿ ಮೋಟಾರ್ ಸೈಕಲ್​ನ್ನ ಸೀಝ್​ ಮಾಡಲಾಗಿದೆ.

ಡ್ರೈವಿಂಗ್​ ಲೈಸೆನ್ಸ್ ಹಾಗೂ ಇತರೆ ಮಾಹಿತಿಗಳನ್ನ ನೀಡಲು ಯುವಕ ಶಕ್ತನಾಗದ ಹಿನ್ನೆಲೆಯಲ್ಲಿ ಬೈಕ್​ನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ಈ ಯುವಕನೇ ಬೈಕ್​ನ ಮಾಲೀಕನೋ ಇಲ್ಲವೇ ಬೇರೆಯವರಿಗೆ ಸೇರಿದ ಬೈಕ್​ ಇದಾಗಿದ್ಯಾ ಅನ್ನೋದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...