alex Certify ಬೆಂಕಿಕಡ್ಡಿಗಳಿಂದ ರಾವಣನ ಮಿನಿ ಪ್ರತಿಕೃತಿ ಮಾಡಿದ 6ರ ಪೋರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಕಿಕಡ್ಡಿಗಳಿಂದ ರಾವಣನ ಮಿನಿ ಪ್ರತಿಕೃತಿ ಮಾಡಿದ 6ರ ಪೋರ

ದಸರಾ ಸಂಭ್ರಮಾಚರಣೆಯ ಕೊನೆಯ ಭಾಗವಾಗಿ ರಾವಣನ ಪ್ರತಿಕೃತಿ ದಹನದ ಅನೇಕ ಕಾರ್ಯಕ್ರಮಗಳನ್ನು ನಾವೆಲ್ಲಾ ನೋಡಿಕೊಂಡೇ ಬೆಳೆದಿದ್ದೇವೆ. ಇಲ್ಲೊಬ್ಬ ಪುಟಾಣಿ ಬೆಂಕಿಕಡ್ಡಿಗಳನ್ನು ಬಳಸಿಕೊಂಡು ರಾವಣನ ಮಿನಿ ಪ್ರತಿಕೃತಿ ನಿರ್ಮಿಸಿದ್ದಾನೆ.

ಅಸ್ಸಾಂನ ಮಿಂಟಿ ರಾಣಿ ದಾಸ್ ಎಂಬಾಕೆ ಪುತ್ರ ಈ ಕಲಾಕೃತಿ ರಚಿಸಿದ್ದಾನೆ. “ರಾವಣನ ಪ್ರತಿಕೃತಿ ಮಾಡಿಕೊಡಲು ನನ್ನ ಮಗ ನನಗೆ ಇಂದು ಕೇಳಿದ. ಸಂಪನ್ಮೂಗಳು ಹೆಚ್ಚು ಇಲ್ಲದ ಕಾರಣ ಈ ಬಾರಿ ರಾವಣನ ದೊಡ್ಡ ಪ್ರತಿಕೃತಿ ಮಾಡಲು ಸಾಧ್ಯವಿಲ್ಲ ಎಂದು ನಾನು ಆತನಿಗೆ ತಿಳಿಸಿದೆ,” ಎಂದಿದ್ದಾರೆ. ಇದಾದ ಕೆಲವು ಕ್ಷಣಗಳ ಬಳಿಕ ಅವರ ಮುದ್ದಿನ ಮಗ ಬೆಂಕಿಕಡ್ಡಿಗಳನ್ನು ಬಳಸಿ ಮಾಡಿದ ರಾವಣನ ಈ ಪ್ರತಿಕೃತಿಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ ಮಿಂಟಿ.

ಬೆಂಕಿಕಡ್ಡಿಗಳನ್ನು ಅಂಟಿನ ಸಹಾಯದಿಂದ ಅಂಟಿಸಿ ರಚಿಸಲಾದ ಈ ರಾವಣನ ಪ್ರತಿಕೃತಿಯನ್ನು ಅರುಜ್ಜಲ್ ಭಾವರ್ನಾವ್‌ ಹಾಗೂ ಆತನ ಅಪ್ಪ-ಅಮ್ಮ ಸೇರಿಕೊಂಡು ಭಾನುವಾರ ಸಂಜೆಯ ವೇಳೆ ದಹಿಸಿದ್ದಾರೆ.

ದಸರಾದ ಸುಸಂದರ್ಭದಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...