alex Certify ಗಮನ ಸೆಳೆಯುತ್ತಿದೆ ಹಾಲು ಮಾರುವವನ ‘ಲಾಕ್ ಡೌನ್’ ಸಂದರ್ಭದ ಸೃಜನಶೀಲತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನ ಸೆಳೆಯುತ್ತಿದೆ ಹಾಲು ಮಾರುವವನ ‘ಲಾಕ್ ಡೌನ್’ ಸಂದರ್ಭದ ಸೃಜನಶೀಲತೆ

ಕೊರೊನಾ ಕಾರಣದಿಂದ ಸಾಮಾಜಿಕ ಅಂತರ ಕಾಪಾಡುವ ವಿಚಾರ ಈಗ ಎಲ್ಲ ಕ್ಷೇತ್ರದಲ್ಲೂ ಚರ್ಚೆಯಲ್ಲಿದೆ. ಈ ನಡುವೆ ವೈಯಕ್ತಿಕ ಅಂತರವನ್ನು ಕಾಪಾಡಬೇಕೆಂಬ ಮಾನದಂಡವೂ ಸರ್ಕಾರದಿಂದ ಹೊರಬಿದ್ದಿದೆ.

ಹೀಗಿರುವಾಗ ಹಾಲು ಮಾರುವವರೊಬ್ಬರು ತಮ್ಮ ವೃತ್ತಿಗೆ ಧಕ್ಕೆಯಾಗದಂತೆ ಮಾನದಂಡಕ್ಕೆ ಅನುಗುಣವಾಗಿ ವಿಶೇಷ ಕ್ರಮ ಅನುಸರಿಸಿರುವುದು ಗಮನ ಸೆಳೆಯುವಂತಿದೆ.

ಹಾಲು ಮಾರಾಟಗಾರ ತಮ್ಮ ದ್ವಿಚಕ್ರ ವಾಹನದ ಹಿಂಭಾಗ ಪೈಪ್ ಅಳವಡಿಸಿ ಗ್ರಾಹಕರಿಗೆ ದೂರದಿಂದಲೇ ಹಾಲನ್ನು ವಿತರಿಸುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಲಿನವರು ಕೊಳವೆಯಲ್ಲಿ ಹಾಲು ಸುರಿಯುತ್ತಾರೆ. ಗ್ರಾಹಕರು ಇನ್ನೊಂದು ತುದಿಯಲ್ಲಿ ಪಾತ್ರೆಯಲ್ಲಿ ಹಾಲನ್ನು ಸಂಗ್ರಹಿಸುತ್ತಾರೆ.

ಮಾರಾಟಗಾರರು ಮಾಸ್ಕ್ ಮತ್ತು ಗ್ಲೌಸ್ ಧರಿಸಿರುವುದನ್ನು ಆ ಚಿತ್ರದಲ್ಲಿ ಕಾಣಬಹುದಾಗಿದೆ. ಇದೊಂದು ಮಾದರಿ ಪ್ರಯತ್ನ, ಸೃಜನಶೀಲತೆ ಎಂಬೆಲ್ಲ ಚರ್ಚೆಗಳು ಜಾಲತಾಣದಲ್ಲಿ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...