ದೇಶದ ಅತಿದೊಡ್ಡ ಮಹಿಳಾ ಮ್ಯಾರಥಾನ್ ಆದ ಪಿಂಕಥಾನ್ ಸ್ಥಾಪಕ ಹಾಗೂ ಫಿಟ್ನೆಸ್ ಮಾರ್ಗದರ್ಶಕ, ನಟ ಮಿಲಿಂದ್ ಸೋಮನ್, 105ನೇ ಜನ್ಮ ದಿನಾಚರಣೆ ಸಂಭ್ರಮದಲ್ಲಿರುವ ಮನ್ ಕೌರ್ರ ಜೊತೆಗಿರುವ ಫೋಟೋವನ್ನ ಶೇರ್ ಮಾಡಿದ್ದಾರೆ.
ತಮ್ಮ 93ನೇ ವಯಸ್ಸಿಗೆ ಓಟವನ್ನ ಶುರು ಮಾಡಿದ ಕೌರ್ ಇದೀಗ ವಿಶ್ವ ಚಾಂಪಿಯನ್ ಓಟಗಾರ್ತಿ ಎನಿಸಿಕೊಂಡಿದ್ದಾರೆ. 105ರ ಇಳಿವಯಸಿನಲ್ಲೂ ಫಿಟ್ ಆಗಿರುವ ಮನ್ ಕೌರ್ ಭಾರತಕ್ಕೆ ಹಲವಾರು ಚಿನ್ನದ ಪದಕಗಳನ್ನ ತಂದು ಕೊಟ್ಟಿದ್ದಾರೆ.
ನಗು ಮೂಡಿಸುತ್ತೆ ಮಗುವಿಗೆ ಹಾಲು ಕುಡಿಸೋಕೆ ಈ ತಂದೆ ಮಾಡಿದ ಪ್ಲಾನ್
ಕೆಲವರು 45 ವರ್ಷಕ್ಕೆ ಜೀವನ ಮುಗೀತು ಅಂತಾರೆ. ಅಂಥವರಿಗೆ ಏನೂ ಮಾಡೋಕೆ ಸಾಧ್ಯವಿಲ್ಲ ಎಂದು ಮಿಲಿಂದ್ ಸೋಮನ್ ಬರೆದುಕೊಂಡಿದ್ದಾರೆ. ಮನ್ ಕೌರ್ ಪಿಂಕ್ಥಾನ್ನ ಮಸ್ಕೋಟ್ ಆಗಿದ್ದಾರೆ ಹಾಗೂ ಆಕೆ ವಿಶ್ವ ಚಾಂಪಿಯನ್ ಓಟಗಾರ್ತಿ ಕೂಡ. 93ರ ಹರೆಯದಲ್ಲಿ ಓಟವನ್ನ ಆರಂಭಿಸಿದ ಕೀರ್ತಿ ಇವರದು. ನಿನ್ನೆ ಕೌರ್ 105ನೇ ವರ್ಷದ ಜನ್ಮದಿನಾಚರಣೆ ಮಾಡಿಕೊಂಡಿದ್ದಾರೆ ಎಂದು 55 ವರ್ಷದ ನಟ, ಮಾಡೆಲ್ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.
ಇವರಿಬ್ಬರೂ ಒಟ್ಟಿಗೆ ರನ್ನಿಂಗ್ ಮಾಡ್ತಿರುವ ವಿಡಿಯೋವನ್ನೂ ಮಿಲಿಂದ್ ಸೋಮನ್ ಶೇರ್ ಮಾಡಿದ್ದಾರೆ.
https://www.instagram.com/p/CL6NRfBHcwr/?utm_source=ig_web_copy_link