alex Certify ವಯಸ್ಸು 100 ದಾಟಿದ್ರೂ ಮುಗಿಯದ ಕ್ರೀಡಾ‌ ಸ್ಫೂರ್ತಿ..! ಮನ್​ಕೌರ್​ ಸಾಧನೆಗೆ ತಲೆಬಾಗಿದ ಮಿಲಿಂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಸು 100 ದಾಟಿದ್ರೂ ಮುಗಿಯದ ಕ್ರೀಡಾ‌ ಸ್ಫೂರ್ತಿ..! ಮನ್​ಕೌರ್​ ಸಾಧನೆಗೆ ತಲೆಬಾಗಿದ ಮಿಲಿಂದ್

ದೇಶದ ಅತಿದೊಡ್ಡ ಮಹಿಳಾ ಮ್ಯಾರಥಾನ್​ ಆದ ಪಿಂಕಥಾನ್​ ಸ್ಥಾಪಕ ಹಾಗೂ ಫಿಟ್​ನೆಸ್​​ ಮಾರ್ಗದರ್ಶಕ, ನಟ ಮಿಲಿಂದ್​ ಸೋಮನ್, 105ನೇ ಜನ್ಮ ದಿನಾಚರಣೆ ಸಂಭ್ರಮದಲ್ಲಿರುವ ಮನ್​ ಕೌರ್​ರ ಜೊತೆಗಿರುವ ಫೋಟೋವನ್ನ ಶೇರ್​ ಮಾಡಿದ್ದಾರೆ.

ತಮ್ಮ 93ನೇ ವಯಸ್ಸಿಗೆ ಓಟವನ್ನ ಶುರು ಮಾಡಿದ ಕೌರ್​ ಇದೀಗ ವಿಶ್ವ ಚಾಂಪಿಯನ್​ ಓಟಗಾರ್ತಿ ಎನಿಸಿಕೊಂಡಿದ್ದಾರೆ. 105ರ ಇಳಿವಯಸಿನಲ್ಲೂ ಫಿಟ್​ ಆಗಿರುವ ಮನ್​ ಕೌರ್ ಭಾರತಕ್ಕೆ ಹಲವಾರು ಚಿನ್ನದ ಪದಕಗಳನ್ನ ತಂದು ಕೊಟ್ಟಿದ್ದಾರೆ.

ನಗು ಮೂಡಿಸುತ್ತೆ ಮಗುವಿಗೆ ಹಾಲು ಕುಡಿಸೋಕೆ ಈ ತಂದೆ ಮಾಡಿದ ಪ್ಲಾನ್

ಕೆಲವರು 45 ವರ್ಷಕ್ಕೆ ಜೀವನ ಮುಗೀತು ಅಂತಾರೆ. ಅಂಥವರಿಗೆ ಏನೂ ಮಾಡೋಕೆ ಸಾಧ್ಯವಿಲ್ಲ ಎಂದು ಮಿಲಿಂದ್​ ಸೋಮನ್​ ಬರೆದುಕೊಂಡಿದ್ದಾರೆ. ಮನ್​ ಕೌರ್​ ಪಿಂಕ್​ಥಾನ್​ನ ಮಸ್ಕೋಟ್​ ಆಗಿದ್ದಾರೆ ಹಾಗೂ ಆಕೆ ವಿಶ್ವ ಚಾಂಪಿಯನ್​ ಓಟಗಾರ್ತಿ ಕೂಡ. 93ರ ಹರೆಯದಲ್ಲಿ ಓಟವನ್ನ ಆರಂಭಿಸಿದ ಕೀರ್ತಿ ಇವರದು. ನಿನ್ನೆ ಕೌರ್​ 105ನೇ ವರ್ಷದ ಜನ್ಮದಿನಾಚರಣೆ ಮಾಡಿಕೊಂಡಿದ್ದಾರೆ ಎಂದು 55 ವರ್ಷದ ನಟ, ಮಾಡೆಲ್​​ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.

ಇವರಿಬ್ಬರೂ ಒಟ್ಟಿಗೆ ರನ್ನಿಂಗ್​ ಮಾಡ್ತಿರುವ ವಿಡಿಯೋವನ್ನೂ ಮಿಲಿಂದ್ ಸೋಮನ್​ ಶೇರ್​ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...