alex Certify ವೈರಲ್ ಆಯ್ತು ಇಡೀ ದೇಶದ ಮನ ಕಲಕಿದ ಘಟನೆಯ ವಿಡಿಯೋ, ಕಂಬನಿ ಮಿಡಿದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಆಯ್ತು ಇಡೀ ದೇಶದ ಮನ ಕಲಕಿದ ಘಟನೆಯ ವಿಡಿಯೋ, ಕಂಬನಿ ಮಿಡಿದ ಜನ

ಶವವಾಗಿ ಮಲಗಿದ್ದ ಅಮ್ಮನನ್ನು ಎಬ್ಬಿಸುತ್ತಿರುವ ಕಂದನ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಹಾರದ ಮುಜಾಫರ್ ನಗರ ರೈಲು ನಿಲ್ದಾಣದಲ್ಲಿ ವಲಸೆ ಕಾರ್ಮಿಕ ಮಹಿಳೆಯೊಬ್ಬರು ಅನಾರೋಗ್ಯ, ಹಸಿವಿನಿಂದ ಮೃತಪಟ್ಟಿದ್ದಾರೆ. ಆದರೆ ಅಮ್ಮ ಮೃತಪಟ್ಟಿರುವುದನ್ನು ತಿಳಿಯದ ಪುಟ್ಟ ಮಗು ತಾಯಿಯ ಮೇಲಿದ್ದ ಹೊದಿಕೆಯನ್ನು ಎಳೆದುಕೊಂಡು ಆಟವಾಡಿದ್ದು ಅಮ್ಮ ಮಲಗಿದ್ದಾಳೆ ಎಂದು ಎಬ್ಬಿಸಲು ಪ್ರಯತ್ನ ನಡೆಸಿದೆ. ಈ ದೃಶ್ಯ ಮನಕಲಕುವಂತಿದೆ.

ಕೂಲಿ ಕೆಲಸಕ್ಕಾಗಿ ಗುಜರಾತ್ ಗೆ ತೆರಳಿದ್ದ ವಲಸೆ ಕಾರ್ಮಿಕ ಮಹಿಳೆ ಸೋಮವಾರ ಗುಜರಾತ್ ನಿಂದ ಬಿಹಾರದ ಮುಜಾಫರ್ ನಗರಕ್ಕೆ ಆಗಮಿಸಿದ್ದಾರೆ. ಆದರೆ ಅನಾರೋಗ್ಯ, ಹಸಿವಿನಿಂದ ತೀವ್ರ ಬಳಲಿದ್ದ ಮಹಿಳೆ ಸಾವನ್ನಪ್ಪಿದ್ದು ರೈಲ್ವೆ ಪ್ಲಾಟ್ ಫಾರಂನಲ್ಲಿ ಮಹಿಳೆಯ ಮೃತದೇಹವನ್ನು ಇರಿಸಲಾಗಿದೆ. ಇದನ್ನು ತಿಳಿಯದ ಮಗು ತಾಯಿಯನ್ನು ಎಬ್ಬಿಸಲು ಪ್ರಯತ್ನಿಸಿದೆ.

ಮಹಿಳೆ ಸಂಬಂಧಿಕರು ಕೂಡ ಕಾರ್ಮಿಕರಾಗಿದ್ದು, ಅವರು ಕೂಡ ಜೊತೆಗಿದ್ದರು. ಅವರೆಲ್ಲ ಕತಿಹಾರ್ ಗೆ ಪ್ರಯಾಣ ಬೆಳೆಸುತ್ತಿದ್ದರು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಲಾಕ್ಡೌನ್ ಜಾರಿಯಾದ ನಂತರ ವಲಸೆ ಕಾರ್ಮಿಕರ ಸಂಕಷ್ಟವಂತೂ ಹೇಳತೀರದಾಗಿದೆ. ಕೆಲಸದ ಸ್ಥಳದಿಂದ ಸ್ವಗ್ರಾಮಗಳಿಗೆ ಹೋಗುವ ಸಂದರ್ಭದಲ್ಲಿ ಅನೇಕ ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತ, ಹಸಿವಿನಿಂದ ಹಾಗೂ ಅನೇಕ ಕಾರಣದಿಂದ ಮೃತಪಟ್ಟಿದ್ದಾರೆ.

ಮುಜಾಫರ್’ನಗರ ರೈಲುನಿಲ್ದಾಣದಲ್ಲಿ ವಲಸೆ ಕಾರ್ಮಿಕ ಮಹಿಳೆ ಹಸಿವು ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದು ಸಾವನ್ನಪ್ಪಿರುವುದನ್ನು ತಿಳಿಯದ ಕಂದಮ್ಮ ಎಬ್ಬಿಸಲು ಪ್ರಯತ್ನ ನಡೆಸಿದೆ. ಇದನ್ನು ಸೆರೆಹಿಡಿದ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ವಿಡಿಯೋ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...