alex Certify ಅಪ್ಪನಿಗಾಗಿ ಮತ ಬೇಡಿದ ಆಮ್ ಆದ್ಮಿ ಪಕ್ಷದ ಸ್ಟಾರ್ ಪ್ರಚಾರಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪನಿಗಾಗಿ ಮತ ಬೇಡಿದ ಆಮ್ ಆದ್ಮಿ ಪಕ್ಷದ ಸ್ಟಾರ್ ಪ್ರಚಾರಕ

ಇವರು ನಮ್ಮಪ್ಪ. ಇವರಿಗೇ ಮತ ಹಾಕಿ. ಆಮ್ ಆದ್ಮಿ ಪಕ್ಷದಿಂದ ನಿಂತಿದ್ದಾರೆ. ಟ್ರ್ಯಾಕ್ಟರ್ ಚಿಹ್ನೆ. ಇದು ನಮ್ಮಪ್ಪನ ವಿವರವುಳ್ಳ ಕಾರ್ಡ್. ಇದರಲ್ಲಿ ಎಲ್ಲ ಬರೆದಿದೆ.

ಹೀಗೆಂದು ಮನೆ-ಮನೆ ಮುಂದೆ ನಿಂತು ಮತಭಿಕ್ಷೆ ಕೇಳುತ್ತಿದ್ದ ಮುದ್ದು ಕಂದಮ್ಮನನ್ನು ಕಂಡವರು, ಅಚ್ಚರಿಯ ಜೊತೆಗೆ ಮತ ಹಾಕುವ ಭರವಸೆಯನ್ನೂ ಕೊಟ್ಟು ಕಳುಹಿಸುತ್ತಿದ್ದರು.

ಪಂಜಾಬ್ ನಗರಸಭೆ ಚುನಾವಣಾ ಪ್ರಚಾರಕ್ಕೆ ಧುಮುಕಿರುವ ಪುಟ್ಟ ಪೋರ, ತನ್ನ ತಂದೆ ಹಾಗೂ ಆಮ್ ಆದ್ಮಿ ಪಕ್ಷದ ಪರವಾಗಿ ಮತ ಯಾಚನೆ ಮಾಡುತ್ತಿದ್ದಾನೆ. ಮನೆ ಮುಂದೆ ನಿಂತು ಮತ ಕೇಳುವ ಮುದ್ದಾದ 12 ಸೆಕೆಂಡಿನ ವೈರಲ್ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಸ್ಟಾರ್ ಪ್ರಚಾರಕ ಎಂದೇ ಜನರು ಬಿರುದು ಕೊಟ್ಟಿದ್ದು, 10 ಸಾವಿರಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...