alex Certify ಬೆಚ್ಚಿಬೀಳಿಸುತ್ತೆ ಸಹಚರನಿಗೆ ಡ್ರಗ್​​ ಪೂರೈಸಲು ಮಾಡಿರುವ ಖತರ್ನಾಕ್‌ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುತ್ತೆ ಸಹಚರನಿಗೆ ಡ್ರಗ್​​ ಪೂರೈಸಲು ಮಾಡಿರುವ ಖತರ್ನಾಕ್‌ ಪ್ಲಾನ್

ಜೈಲಿನೊಳಗೆ ಡ್ರಗ್ಸ್ ತುಂಬಿದ ಟೆನ್ನಿಸ್​ ಬಾಲ್​ನ್ನು ಎಸೆಯಲು ಯತ್ನಿಸಿದ ಮೂವರನ್ನ ಬಂಧಿಸಿದ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಲಂಬಾ ಜೈಲಿನಲ್ಲಿ ನಡೆದಿದೆ.

ಜೈಲಿನ ಹೊರಕ್ಕೆ ಕೈಯಲ್ಲಿ ಟೆನ್ನಿಸ್​ ಬಾಲ್​ ಹಿಡಿದು ಅನುಮಾನಾಸ್ಪಾದವಾಗಿ ಓಡಾಡುತ್ತಿದ್ದ ಆರೋಪಿಗಳು ಗಸ್ತಿನಲ್ಲಿದ್ದ ಕಾನ್ಸ್​​ಟೇಬಲ್​ಗಳ ಕಣ್ಣಿಗೆ ಬಿದ್ದಿದ್ದಾರೆ.

ಪೊಲೀಸರು ಕೂಡಲೇ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಈ ಆರೋಪಿಗಳು ಪುಣೆಯವರೆಂದೂ ಟೆನ್ನಿಸ್ ಬಾಲ್​ಗಳಲ್ಲಿ ಮರಿಜುವಾನಾ ತುಂಬಿಕೊಂಡು ಬಂದಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಜೈಲಿನೊಳಗಿದ್ದ ತಮ್ಮ ಸಹಚರನಿಗೆ ಈ ಬಾಲ್​ನ್ನ ನೀಡಲು ಆರೋಪಿಗಳು ಪ್ಲಾನ್​ ಮಾಡಿದ್ದರಂತೆ. ಕೂಡಲೇ ಮೂವರನ್ನ ಬಂಧಿಸಿದ ಪೊಲೀಸರು ಡ್ರಗ್​ ತುಂಬಿದ್ದ ಬಾಲ್​ನ್ನ ವಶಕ್ಕೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...