alex Certify ಭಾರೀ ವಿದ್ಯುತ್‌ ಬಿಲ್ ಬಂದಿರುವುದಕ್ಕೆ ನೆಟ್ಟಿಗರ ವ್ಯಂಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರೀ ವಿದ್ಯುತ್‌ ಬಿಲ್ ಬಂದಿರುವುದಕ್ಕೆ ನೆಟ್ಟಿಗರ ವ್ಯಂಗ್ಯ

ಮೂರು ತಿಂಗಳ ಲಾಕ್‌ಡೌನ್ ಅವಧಿಯಲ್ಲಿ ತಮಗೆ ಬಂದ ವಿದ್ಯುತ್ ಬಿಲ್ ‌ಅನ್ನು ನಟಿ ತಾಪ್ಸಿ ಪನ್ನು ತೋರಿಸಿದ್ದು, 57,000 ರೂ.ಗಳಷ್ಟಿರುವ ಈ ಬಿಲ್‌ ಕಂಡು ತಾವು ದಂಗಾಗಿರುವುದಾಗಿ ತಿಳಿಸಿದ್ದಾರೆ.

ಇದೇ ವ್ಯಥೆಯನ್ನು ಬಾಲಿವುಡ್‌ನ ಇತರ ನಟರುಗಳು ಮಾತ್ರವಲ್ಲದೇ ಸಾಮಾನ್ಯ ಜನರೂ ಸಹ ಹಂಚಿಕೊಂಡಿದ್ದಾರೆ. ಕೋವಿಡ್-19 ಬರೆಯ ನಡುವೆ ವಿದ್ಯುತ್‌ ಬಿಲ್ ಈ ಮಟ್ಟದಲ್ಲಿ ಬರುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದು ಅಸಹನೆ ತೋಡಿಕೊಂಡಿದ್ದಾರೆ.

ಈ ಲಾಕ್‌ಡೌನ್ ಅವಧಿಯಲ್ಲಿ ಸಿಕ್ಕಾಪಟ್ಟೆ ವಿದ್ಯುತ್‌ ಬಳಕೆಯಾಗುತ್ತಿರುವ ಕಾರಣ, ಹೀಗೆ ಅಸಹಜವಾಗಿ ದೊಡ್ಡ ಮಟ್ಟದಲ್ಲಿ ಬಿಲ್ ಆಗುತ್ತಿದೆ ಎಂದು ವಿದ್ಯುತ್‌ ವಿತರಣಾ ಕಂಪನಿಗಳು ಸಬೂಬು ಹೇಳಿಕೊಂಡಿವೆ. ವಿದ್ಯುತ್‌ ಬಿಲ್‌ನ ‌ಪ್ರಹಸನ ಈಗ ಮೆಮೆಗಳಿಗೆ ಆಹಾರವಾಗಿದ್ದು, ಮುಂಬೈ ಮಾತ್ರವಲ್ಲ ದೆಹಲಿಯಲ್ಲೂ ಸಹ ಜನರು ತಮಗಾಗುತ್ತಿರುವ ಸಮಸ್ಯೆಯನ್ನು ಮೆಮೆಗಳ ಮೂಲಕ ವ್ಯಂಗ್ಯಮಯವಾಗಿ ಹೇಳಿಕೊಳ್ಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...