alex Certify ನೋಟುಗಳನ್ನು ಸಂಗ್ರಹಿಸುತ್ತಲೇ ದಾಖಲೆ ಬರೆದ ಟೆಕ್ಕಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಟುಗಳನ್ನು ಸಂಗ್ರಹಿಸುತ್ತಲೇ ದಾಖಲೆ ಬರೆದ ಟೆಕ್ಕಿ….!

ಬೇರೆ ಬೇರೆ ದೇಶಗಳ ಕರೆನ್ಸಿಗಳನ್ನ ಸಂಗ್ರಹ ಮಾಡಿಟ್ಟುಕೊಳ್ಳುವ ಹವ್ಯಾಸವುಳ್ಳ ಜನರು ಹಲವರು ಇದ್ದಾರೆ. ಅದೇ ರೀತಿಯ ಹವ್ಯಾಸವನ್ನ ಹೊಂದಿದ್ದ ಇಂಜಿನಿಯರ್​ ಅಣ್ಣಾಮಲೈ ರಾಜೇಂದ್ರನ್​​ ಎಂಬವರು ಇದೀಗ ಕರೆನ್ಸಿ ಸಂಗ್ರಹದಲ್ಲಿ ದಾಖಲೆಯನ್ನೇ ಮಾಡಿದ್ದಾರೆ.

410 ದೇಶಗಳ ಕರೆನ್ಸಿಯನ್ನ ಸಂಗ್ರಹ ಮಾಡೋದ್ರ ಮೂಲಕ ಅಣ್ಣಾಮಲೈ ಏಷ್ಯಾ ಹಾಗೂ ಭಾರತದ ದಾಖಲೆಯ ಬುಕ್​ನಲ್ಲಿ ಹೆಸರನ್ನ ನೋಂದಾಯಿಸಿದ್ದಾರೆ. ಇವರು ಸಂಗ್ರಹಿಸಿರುವ ಕರೆನ್ಸಿಗಳಲ್ಲಿ ಕೆ 16 ಹಾಗೂ 17ನೇ ಶತಮಾನಕ್ಕೆ ಸೇರಿದ ಅಪರೂಪದ ಕರೆನ್ಸಿಗಳೂ ಸೇರಿವೆ.

34 ವರ್ಷದ ಅಣ್ಣಾಮಲೈ ವಿವಿಧ ದೇಶಗಳ ಸಂಪ್ರದಾಯ ಹಾಗೂ ಪದ್ಧತಿಗಳ ಬಗ್ಗೆಯೂ ಮಾಹಿತಿಯನ್ನ ಕಲೆ ಹಾಕ್ತಿದ್ದಾರೆ. ತಮ್ಮ ಕೆಲಸದ ನಡುವೆಯೂ ಇಂತಹ ಹವ್ಯಾಸಗಳನ್ನೂ ಸರಿದೂಗಿಸಿಕೊಂಡು ಹೋಗ್ತಿದ್ದಾರೆ.

ನಾನು ಹೆಚ್ಚಿನ ನೋಟುಗಳನ್ನ ಸ್ನೇಹಿತರು ಹಾಗೂ ನಾಣ್ಯಶಾಸ್ತ್ರದ ಹರಾಜಿನ ಮೂಲಕ ಸಂಗ್ರಹಿಸಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಅಣ್ಣಾಮಲೈ ಸಂಗ್ರಹಿಸಿದ 410 ನೋಟುಗಳಲ್ಲಿ 189 ಯುಎನ್​ ಸದಸ್ಯ ರಾಷ್ಟ್ರಗಳು ಹಾಗೂ 27 ದ್ವೀಪ ಹಾಗೂ ಸಾಗರೋತ್ತರ ಪ್ರದೇಶಗಳಿಗೆ ಸೇರಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...