alex Certify ಮಹಿಳಾ ಪೊಲೀಸ್​ ಅಧಿಕಾರಿ ಮಾನವೀಯತೆಗೆ ನೆಟ್ಟಿಗರ ಮೆಚ್ಚುಗೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಪೊಲೀಸ್​ ಅಧಿಕಾರಿ ಮಾನವೀಯತೆಗೆ ನೆಟ್ಟಿಗರ ಮೆಚ್ಚುಗೆ..!

ದಯಾಮಯಿ ಆಗಿರಬೇಕು ಅಂದರೆ ಜಾಸ್ತಿ ಬೆಲೆ ತೆರಬೇಕಾದದ್ದು ಏನಿಲ್ಲ. ಆದರೆ ಶುದ್ಧ ಮನಸ್ಸು ಇರೋದು ತುಂಬಾನೇ ಮುಖ್ಯ. ಈ ಮಾತಿಗೆ ಸಾಕ್ಷಿಯೆಂಬಂತೆ ಮಣಿಪುರದ ಮಹಿಳಾ ಪೊಲೀಸ್​ ತಮ್ಮ ದಯಾಗುಣದ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ.

ಮಣಿಪುರ ಸ್ಟೇಷನ್​ ಇನ್​ಚಾರ್ಜ್​ ಏಕ್ತಾ ಸಿಂಗ್​ ತಮ್ಮ ಕರ್ತವ್ಯದ ಜೊತೆ ಜೊತೆಗೆ ವೃದ್ಧ ಮಹಿಳೆಗೆ ಸಹಾಯ ಹಸ್ತ ಚಾಚುವ ಮೂಲಕ ಮನೆ ಮಾತಾಗಿದ್ದಾರೆ. ಸದ್ಯ ಮಣಿಪುರದಲ್ಲಿ ಸಿಕ್ಕಾಪಟ್ಟೆ ಚಳಿಯ ವಾತಾವರಣವಿದೆ. ಕಡು ಚಳಿಯಲ್ಲೂ ಮಹಿಳೆಯೊಬ್ಬರು ಬರಿಗಾಲಲ್ಲಿ ನಡೆಯುತ್ತಿರೋದನ್ನ ಏಕ್ತಾ ಸಿಂಗ್​ ಗಮನಿಸಿದ್ದಾರೆ.

ಕೂಡಲೇ ಆ ವೃದ್ಧೆಗಾಗಿ ಶೂ ಖರೀದಿಸಿದ ಪೊಲೀಸ್ ಅಧಿಕಾರಿಣಿ ಸ್ವತಃ ತಮ್ಮ ಕೈಯಾರೇ ವೃದ್ಧೆಯ ಕಾಲಿಗೆ ಅದನ್ನ ತೊಡಿಸಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಮಹಿಳಾ ಪೊಲೀಸ್​ ಅಧಿಕಾರಿಯ ಮಾನವೀಯತೆಗೆ ಸಲಾಂ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...