alex Certify ʼಪಂದ್ಯ ಶ್ರೇಷ್ಠʼ ಪ್ರಶಸ್ತಿ ಗೆದ್ದವನಿಗೆ ಬಹುಮಾನ ರೂಪದಲ್ಲಿ ಸಿಗ್ತು ವಿಚಿತ್ರ ಉಡುಗೊರೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪಂದ್ಯ ಶ್ರೇಷ್ಠʼ ಪ್ರಶಸ್ತಿ ಗೆದ್ದವನಿಗೆ ಬಹುಮಾನ ರೂಪದಲ್ಲಿ ಸಿಗ್ತು ವಿಚಿತ್ರ ಉಡುಗೊರೆ..!

ದೇಶದಲ್ಲಿ ಪೆಟ್ರೋಲ್​ ಬೆಲೆ ಗಣನೀಯ ಏರಿಕೆ ಕಂಡಿದ್ದು ಶ್ರೀ ಸಾಮಾನ್ಯರ ಕಣ್ಣನ್ನ ಕೆಂಪಗಾಗಿಸಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್​ ನೂರರ ಗಡಿ ದಾಟಿದೆ. ಕೇವಲ ಪೆಟ್ರೋಲ್​ ಮಾತ್ರವಲ್ಲದೇ ಸೋಮವಾರ ಎಲ್​ಪಿಜಿ ಸಿಲಿಂಡರ್​ ದರ ಕೂಡ ಮತ್ತೆ 25 ರೂಪಾಯಿ ಏರಿಕೆ ಕಂಡಿದೆ.

ಈಗಾಗಲೇ ಪೆಟ್ರೋಲ್​ ದರ ಏರಿಕೆ ಕುರಿತಾಗಿ ಸೋಶಿಯಲ್​ ಮೀಡಿಯಾಗಳಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗ್ತಿದೆ. ಕೆಲ ದಿನಗಳ ಹಿಂದಷ್ಟೇ ತಿರುಕ್ಕುರಲ್​​ನ್ನು ಸ್ಪಷ್ಟವಾಗಿ ಪಠಿಸಿದ ಕರೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಬಹುಮಾನ ರೂಪದಲ್ಲಿ 1 ಲೀಟರ್​ ಪೆಟ್ರೋಲ್​ ನೀಡಿದ್ದು ಭಾರೀ ಸುದ್ದಿಯಾಗಿತ್ತು.

ಇದಾದ ಬಳಿಕ ವ್ಯಕ್ತಿಯೊಬ್ಬ ಪೆಟ್ರೋಲ್​ ಪಂಪ್​ ಎದುರು ನಿಂತು ಕ್ರಿಕೆಟ್​ ಬ್ಯಾಟ್​ ಹಾಗೂ ಹೆಲ್ಮೆಟ್​ನ್ನು ಕೈಯಲ್ಲಿ ಹಿಡಿದು ಸೆಂಚುರಿ ಬಾರಿಸಿದವರಂತೆ ಪೋಸ್​ ಕೊಟ್ಟಿದ್ದು ಕೂಡ ವೈರಲ್​ ಆಗಿತ್ತು. ಪೆಟ್ರೋಲ್​ ದರ ನೂರು ರೂಪಾಯಿ ದಾಟಿದ್ದನ್ನ ಖಂಡಿಸಿ ಈ ವ್ಯಕ್ತಿ ಸೆಂಚುರಿ ಬಾರಿಸಿದವರಂತೆ ಪೋಸ್​ ನೀಡಿದ್ದರು.

ಮೈತುಂಬಾ ಟ್ಯಾಟೂ ಹಾಕಿಸಿಕೊಳ್ಳಲು 35 ಲಕ್ಷ ರೂ. ಖರ್ಚು ಮಾಡಿದ ಮಹಿಳೆ

ಇದೀಗ ಕ್ರಿಕೆಟ್​ ಟೂರ್ನಮೆಂಟ್​​ನಲ್ಲೂ ಪೆಟ್ರೋಲ್​ನ್ನು ಬಳಕೆ ಮಾಡಲಾಗಿದೆ. ಕ್ರಿಕೆಟ್​ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗನಿಗೆ ಬಹುಮಾನ ರೂಪದಲ್ಲಿ 5 ಲೀಟರ್​ ಪೆಟ್ರೋಲ್​ ನೀಡಲಾಗಿದೆ. ಇನ್ನು ಸರಳವಾಗಿ ಹೇಳೋದಾದ್ರೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಕ್ರಿಕೆಟಿಗನಿಗೆ ಬಹುಮಾನವಾಗಿ 5 ಲೀಟರ್​ ಪೆಟ್ರೋಲ್​ ಸಿಕ್ಕಿದೆ.

ಈ ಕ್ರಿಕೆಟ್​ ಪಂದ್ಯವನ್ನ ಭೋಪಾಲ್​ನ ಕಾಂಗ್ರೆಸ್​ ನಾಯಕ ಮನೋಜ್​ ಶುಕ್ಲಾ ಆಯೋಜಿಸಿದ್ದರು ಎನ್ನಲಾಗಿದೆ. ಭಾನುವಾರ ಫೈನಲ್ ಪಂದ್ಯ ನಡೆಸಲಾಗಿದ್ದು ಸಲಾಲುದ್ದೀನ್​ ಅಬ್ಬಸಿ ಎಂಬ ಕ್ರಿಕೆಟಿಗನಿಗೆ ಈ ಪೆಟ್ರೋಲ್​ ಪ್ರಶಸ್ತಿ ಲಭಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...