alex Certify ಮೈತುಂಬಾ ಟ್ಯಾಟೂ ಹಾಕಿಸಿಕೊಳ್ಳಲು 35 ಲಕ್ಷ ರೂ. ಖರ್ಚು ಮಾಡಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈತುಂಬಾ ಟ್ಯಾಟೂ ಹಾಕಿಸಿಕೊಳ್ಳಲು 35 ಲಕ್ಷ ರೂ. ಖರ್ಚು ಮಾಡಿದ ಮಹಿಳೆ

UK's most tattooed woman 95% body tattooed | Heavily-inked woman covers half her skin in make up for social experiment | Trending & Viral News

ಲಂಡನ್: ಬೇಕಿ ಹಾಲ್ಟ್ ಎಂಬ 33 ವರ್ಷದ ಮಹಿಳೆಯ ಮೈ ತುಂಬ ಟ್ಯಾಟೂಗಳೇ. ಮುಖ, ಎದೆ, ಕಂಕುಳು ಯಾವ ಭಾಗವನ್ನೂ ಖಾಲಿ ಬಿಟ್ಟಿಲ್ಲ. ಆಕೆ ಬ್ರಿಟನ್ ನ ಅತೀ ಹೆಚ್ಚು ಟ್ಯಾಟೂ ಹೊಂದಿದ ಮಹಿಳೆ.‌

ತನ್ನ‌ ದೇಹದ ಶೇ. 95 ರಷ್ಟು ಭಾಗದಲ್ಲಿ ಟ್ಯಾಟೂ ಬಿಡಿಸಿಕೊಂಡಿರುವ ಹಾಲ್ಟ್‌ ಅವರು ಜೀವನದಲ್ಲಿ 35 ಸಾವಿರ ಪೌಂಡ್ (35 ಲಕ್ಷ ರೂ.) ಗಳನ್ನು ಇದಕ್ಕಾಗಿ ಖರ್ಚು ಮಾಡಿದ್ದಾರಂತೆ. ಇತ್ತೀಚೆಗೆ ನಡೆದ “ಐ” ಟಿವಿ ಸಂದರ್ಶನದಲ್ಲಿ ಅವರು, “ಕಂಕುಳ ಒಳಗೆ ಹಾಗೂ ತಮ್ಮ ಕೆಲ ಗುಪ್ತ ಸ್ಥಳಗಳ ಮೇಲೆ‌ ಟ್ಯಾಟೂ ಬಿಡಿಸಿಕೊಳ್ಳುವುದು ಅತ್ಯಂತ ಕಷ್ಟದ, ನೋವಿನ ಕೆಲಸವಾಗಿತ್ತು” ಎಂದಿದ್ದಾರೆ.

ಗಾಳಿಯಲ್ಲಿ ತಿರುಗಿಸಿದರೆ ಸಾಕು ಹೊರ ಹೊಮ್ಮುತ್ತೆ ʼಕೊಳಲʼ ನಾದ

ಸಾಮಾಜಿಕ ಪ್ರಯೋಗವೊಂದನ್ನು ಮಾಡುವ ಉದ್ದೇಶದಿಂದ ಹಾಲ್ಟ್ ಇತ್ತೀಚೆಗೆ ತಮ್ಮ ಅರ್ಧ ದೇಹವನ್ನು ಟ್ಯಾಟೂ ಇಲ್ಲದೇ ಪ್ರದರ್ಶಿಸಿದ್ದರು. “ಟ್ಯಾಟೂ ಇಲ್ಲದೇ ನಾನು ಹುಚ್ಚಿಯಂತೆ ಕಾಣುತ್ತೇನೆ” ಎಂದು ಕ್ಯಾಪ್ಶನ್ ಹಾಕಿ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದರು. ಅವರ ನಿರೀಕ್ಷೆಯಂತೆಯೇ ಜನ ಪ್ರತಿಕ್ರಿಯೆ ನೀಡಿದ್ದು, ಸಹಾಯಕ್ಕೆ ಬಂದಿದ್ದಾರೆ ಎಂದು ಹಾಲ್ಟ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...