alex Certify ಮದುವೆಗೆ ಬಂದವರಿಗೆ ಅಚ್ಚರಿ…! ಒಂದೇ ಮುಹೂರ್ತದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಬಂದವರಿಗೆ ಅಚ್ಚರಿ…! ಒಂದೇ ಮುಹೂರ್ತದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ ಭೂಪ

ಮಧ್ಯಪ್ರದೇಶದ ಯುವಕನೊಬ್ಬ ಒಂದೇ ಮುಹೂರ್ತದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ್ದಾನೆ. ಬೈತುಲ್ ಮೂಲದ ಸಂದೀಪ್ ಉಯಿಕೆ ಯುವತಿಯನ್ನು ಪ್ರೀತಿಸಿದ್ದು ಆಕೆಯನ್ನು ಮದುವೆಯಾಗಿದ್ದಾನೆ. ಇದೇ ವೇಳೆ ಪೋಷಕರು ನೋಡಿದ ಹುಡುಗಿಯನ್ನು ಮದುವೆಯಾಗಿದ್ದಾನೆ.

ಬೈತುಲ್ ಜಿಲ್ಲಾ ಕೇಂದ್ರದಿಂದ 40 ಕಿಲೋಮೀಟರ್ ದೂರದ ಘೋಡ ಡೋಂಗ್ರಿ ಬ್ಲಾಕ್ ಕೆರಿಯಾ ಗ್ರಾಮದಲ್ಲಿ ಈ ಮದುವೆ ನಡೆದಿದೆ. ಭೋಪಾಲ್ ನಲ್ಲಿ ಓದುತ್ತಿದ್ದ ಸಂದೀಪ್ ಹೋಶಂಗಬಾದ್ ಮೂಲದ ಯುವತಿಯನ್ನು ಪ್ರೀತಿಸಿದ್ದು ಆಕೆಯನ್ನು ಮದುವೆಯಾಗಲು ನಿರ್ಧರಿಸಿದ್ದ. ಆತನ ಪೋಷಕರು ಕೂಡ ಹುಡುಗಿ ನೋಡಿ ಮದುವೆ ನಿಶ್ಚಯ ಮಾಡಿದ್ದರು.

ಮದುವೆ ವಿಚಾರವಾಗಿ ಮೂರು ಕುಟುಂಬದವರ ನಡುವೆ ಮಾತುಕತೆ ನಡೆದಿದೆ. ಹಿರಿಯರು ಸೇರಿ ಪಂಚಾಯಿತಿ ಮಾಡಿದ್ದು, ಇಬ್ಬರು ಹುಡುಗಿಯರು ಸಂದೀಪ್ ನನ್ನೇ ಮದುವೆಯಾಗುವುದಾಗಿ ಹೇಳಿದ್ದು ಕೊನೆಗೆ ಹಿರಿಯರು, ಸಂಬಂಧಿಕರ ಸಮ್ಮುಖದಲ್ಲಿ ಮದುವೆ ನೆರವೇರಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...