alex Certify ಪ್ರೀತಿಸಿದ ಜೋಡಿ ಹಸೆಮಣೆ ಏರಲು ಹೊರಟಿದ್ದಾಗಲೇ ಘೋರ ದುರಂತ: ಅಪಘಾತದಲ್ಲಿ ಹಾರಿಹೋಯ್ತು ಯುವಕನ ಪ್ರಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿದ ಜೋಡಿ ಹಸೆಮಣೆ ಏರಲು ಹೊರಟಿದ್ದಾಗಲೇ ಘೋರ ದುರಂತ: ಅಪಘಾತದಲ್ಲಿ ಹಾರಿಹೋಯ್ತು ಯುವಕನ ಪ್ರಾಣ

ಹೈದರಾಬಾದ್: ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದ ಜೋಡಿ ಹಸಮಣೆ ಏರಲು ಹೊರಟಿದ್ದಾಗಲೇ ದಾರುಣ ಘಟನೆ ನಡೆದಿದೆ.

ಮದುವೆಯಾಗಬೇಕಿದ್ದ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ನಾಗರಾಜ್ ಮೃತಪಟ್ಟ ಯುವಕ. ಹಯಾತ್ ನಗರದ ನಾಗರಾಜ್, ಶ್ರೀಲತಾ ಪ್ರೀತಿಸಿದ್ದು, ಮದುವೆಯಾಗಲು ಸ್ನೇಹಿತರೊಂದಿಗೆ ತೆರಳುತ್ತಿದ್ದ ವೇಳೆಯಲ್ಲೇ ಹಿಂಬದಿಯಿಂದ ಕಾರ್ ಡಿಕ್ಕಿಯಾಗಿದೆ.

ಅಪಘಾತದಲ್ಲಿ ನಾಗರಾಜ್ ಸಾವನ್ನಪ್ಪಿರುವುದು ಅನುಮಾನಕ್ಕೆ ಕಾರಣವಾಗಿದೆ. ಏಕಾಏಕಿ ಕಾರ್ ಬ್ರೇಕ್ ಫೇಲ್ ಆಗಿ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಅಪಘಾತಲ್ಲಿ ಯುವತಿ ಹಾಗೂ ನಾಗರಾಜ್ ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತದ ಸುತ್ತ ಅನುಮಾನ ಮೂಡಿದೆ. ಇದು ಕೊಲೆ ಇರಬಹುದೆಂದು ಶಂಕಿಸಲಾಗಿದೆ.

ತೆಲಂಗಾಣದ ಹೈದರಾಬಾದ್ -ವಿಜಯವಾಡ ರಾಷ್ಟ್ರೀಯ ಹೆದ್ದಾರಿಯ ಭುವನಗಿರಿಯ ಚೌತುಪ್ಪಲ್ ಟ್ರಾಫಿಕ್ ಸಿಗ್ನಲ್ ನಲ್ಲಿ ಅಪಘಾತ ಸಂಭವಿಸಿದ್ದು, ಅಪರಿಚಿತ ವಾಹನ ಏಕಾಏಕಿ ನುಗ್ಗಿ ದ್ವಿಚಕ್ರವಾಹನಗಳಿಗೆ ಡಿಕ್ಕಿ ಹೊಡೆದಿದೆ. ಕಾರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...