alex Certify ʼಡೇರ್‌ಡೆವಿಲ್‌ʼ ಸ್ಟಂಟ್ ಮಾಡಿದ ಯುವಕನಿಗೆ ಪೊಲೀಸರು ಬುದ್ಧಿ ಕಲಿಸಿದ್ದು ಹೀಗೆ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಡೇರ್‌ಡೆವಿಲ್‌ʼ ಸ್ಟಂಟ್ ಮಾಡಿದ ಯುವಕನಿಗೆ ಪೊಲೀಸರು ಬುದ್ಧಿ ಕಲಿಸಿದ್ದು ಹೀಗೆ……!

ಬಹಳಷ್ಟು ಯುವಕರಿಗೆ ’ಡೇರ್‌ಡೆವಿಲ್’ ಸ್ಟಂಟ್‌ಗಳನ್ನು ಮಾಡುವ ವಿಪರೀತ ಹುಚ್ಚು. ಕೆಲವೊಂದು ಮಂದಿಗೆ ಈ ಗೀಳು ಯಾವ ಮಟ್ಟದಲ್ಲಿ ಇರುತ್ತದೆ ಎಂದರೆ, ತೀರಾ ತಮ್ಮ ಪ್ರಾಣವನ್ನೇ ಪಣಕ್ಕಿಡುವಷ್ಟು.

ಉತ್ತರ ಪ್ರದೇಶದ ಉಜ್ವಲ್ ಯಾದವ್‌ ಇದಕ್ಕೊಂದು ನಿದರ್ಶನ. ಚಲಿಸುತ್ತಿರುವ ಕಾರೊಂದರ ಮೇಲೆ ಪುಶ್-ಅಪ್ ಮಾಡುತ್ತಿರುವ ಯಾದವ್‌ ವಿಡಿಯೋ ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ವಿಷಯ ತಿಳಿಯುತ್ತಲೇ ಕ್ರಮಕ್ಕೆ ಮುಂದಾದ ರಾಜ್ಯ ಪೊಲೀಸರು, ಆತನ ಸಾಹಸದ ವಿಡಿಯೋಗೆ ’ಕಾಫಿನ್ ಡ್ಯಾನ್ಸ್‌’ನ ಬ್ಯಾಗ್ರೌಂಡ್ ಮ್ಯೂಸಿಕ್ ಸೇರಿಸಿ ಟ್ವಿಟರ್‌ನಲ್ಲಿ ಶೇರ್‌ ಮಾಡುವ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ಕಳುಹಿಸಿದ್ದಾರೆ.

ವಯಸ್ಸಲ್ಲದ ವಯಸ್ಸಲ್ಲಿ ಗರ್ಭಿಣಿಯಾದ ಬಾಲಕಿ: ಸುಮೋಟೊ ಕೇಸ್ ದಾಖಲು

“ಕೆಲವೊಂದು ಪುಶ್‌-ಅಪ್‌ಗಳು ಕಾನೂನಿನ ಕಣ್ಣುಗಳಲ್ಲಿ ನಿಮ್ಮನ್ನು ಕೆಳಗೆ ಇಳಿಯುವಂತೆ ಮಾಡುತ್ತವೆ,” ಎಂದು ಪೊಲೀಸರ ಈ ಟ್ವೀಟ್ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...