alex Certify ಜಿಮೇಲ್​ ಪಾಸ್​ವರ್ಡ್ ರಿಸೆಟ್​​ಗೆ ಗೂಗಲ್‌ ಸಿಇಓ ಬಳಿ ಸಲಹೆ ಕೇಳಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಮೇಲ್​ ಪಾಸ್​ವರ್ಡ್ ರಿಸೆಟ್​​ಗೆ ಗೂಗಲ್‌ ಸಿಇಓ ಬಳಿ ಸಲಹೆ ಕೇಳಿದ ಭೂಪ…!

ಜಿಮೇಲ್​​ ಖಾತೆಯ ಪಾಸ್​ವರ್ಡ್​ ಕಳೆದುಕೊಳ್ಳೋದು ಬಹಳ ಸಾಮಾನ್ಯ ವಿಷಯವಾಗಿದೆ. ಆದರೆ ಯುಟ್ಯೂಬ್​ನಲ್ಲಿ ಈ ಎಲ್ಲಾ ಗೊಂದಲಕ್ಕೆ ಪರಿಹಾರ ಸಿಗುತ್ತೆ. ಹೀಗಾಗಿ ಪಾಸ್​ವರ್ಡ್ ಮರೆತು ಹೋಗಿದ್ದರೂ ಸಹ ಅದೊಂದು ದೊಡ್ಡ ವಿಚಾರ ಎನಿಸಲ್ಲ.

ಒಂದು ವೇಳೆ ಯುಟ್ಯೂಬ್​ನಲ್ಲೂ ನಿಮ್ಮ ಗೊಂದಲಕ್ಕೆ ಪರಿಹಾರ ಸಿಕ್ಕಿಲ್ಲ ಅಂದರೆ ಏನು ಮಾಡುತ್ತೀರಿ..? ಕೊನೆಯ ಪ್ರಯತ್ನ ಎಂಬಂತೆ ಸಹಾಯವಾಣಿಗೆ ಕರೆ ಮಾಡಬಹುದು. ಆದರೆ ಎಂದಾದರೂ ನಿಮ್ಮ ಈ ಗೊಂದಲಗಳನ್ನ ಗೂಗಲ್​ ಸಿಇಓ ಸುಂದರ್​ ಪಿಚ್ಚೈ ಬಳಿ ಪರಿಹರಿಸಿಕೊಳ್ಳಬೇಕು ಎಂದು ಎನಿಸಿದ್ದಿದೆಯೇ..?

ಕೊರೋನಾ ಸಂಕಷ್ಟದ ಹೊತ್ತಲ್ಲೇ ಮತ್ತೊಂದು ಶಾಕ್: ವೈದ್ಯಕೀಯ ಪರಿಕರ ದರ ದಿಢೀರ್ ದುಬಾರಿ

ಟ್ವಿಟರ್​ ಬಳಕೆದಾರರೊಬ್ಬರು ಸುಂದರ್ ಪಿಚ್ಚೈ ಬಳಿ ಜಿಮೇಲ್​ ಪಾಸ್​ವರ್ಡ್​ ಹುಡುಕಲು ಸಹಾಯ ಮಾಡುವಂತೆ ಕೋರಿ ಟ್ವೀಟ್​ ಮಾಡಿದ್ದಾರೆ..! ಹೆಲ್ಲೋ ಸರ್, ನೀವು ಹೇಗಿದ್ದೀರಿ..? ನಾನು ಜಿಮೇಲ್​ ಐಡಿ ಪಾಸ್​ವರ್ಡ್​ಗಳನ್ನ ಕಳೆದುಕೊಂಡಿದ್ದೇನೆ. ದಯಮಾಡಿ ಪಾಸ್​ವರ್ಡ್ ರಿಸೆಟ್​​ ಮಾಡೋದು ಹೇಗೆ ಎಂದು ಹೇಳಿ. ದಯಮಾಡಿ ಸಹಾಯ ಮಾಡಿ ಎಂದು ಟ್ವೀಟಾಯಿಸಿದ್ದಾರೆ .

ಕೆಲ ದಿನಗಳ ಹಿಂದಷ್ಟೇ ಸುಂದರ್​ ಪಿಚ್ಚೈ ಕೋವಿಡ್​ 19 ವಿಚಾರವಾಗಿ ಟ್ವೀಟ್​ ಮಾಡಿದ್ದರು. ದೇಶದ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಗೂಗಲ್​ ಹಾಗೂ ಗೂಗಲ್​ ಸಿಬ್ಬಂದಿ ಒಂದಾಗಿ 135 ಕೋಟಿ ರೂಪಾಯಿ ದೇಣಿಗೆ ನೀಡಲಿದೆ ಎಂದು ಟ್ವೀಟ್​ ಮಾಡಿದ್ದರು. ಈ ಪೋಸ್ಟ್​​ಗೆ ಸಂಬಂಧಿಸಿ ಮದನ್​​ ತಮ್ಮ ಜಿಮೇಲ್​ ಗೊಂದಲದ ಬಗ್ಗೆ ಟ್ವೀಟ್​ ಮಾಡಿದ್ದಾರೆ.

ಆದರೆ ಗೂಗಲ್​ ಸಿಇಒ ಈವರೆಗೂ ಈ ಟ್ವೀಟ್​ ನೋಡಿರುವಂತೆ ಕಾಣುತ್ತಿಲ್ಲ. ಸುಂದರ್​ ಪಿಚ್ಚೈ ಏನಾದರೂ ಉತ್ತರ ನೀಡಬಹುದೇ ಎಂಬ ಕುತೂಹಲ ಅನೇಕರಲ್ಲಿದೆ.

— Sundar Pichai (@sundarpichai) April 26, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...