alex Certify ರೊಟ್ಟಿಯ ಮೇಲೆ ಎಂಜಲು ಉಗಿದವನು ʼಅರೆಸ್ಟ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೊಟ್ಟಿಯ ಮೇಲೆ ಎಂಜಲು ಉಗಿದವನು ʼಅರೆಸ್ಟ್ʼ

ಒಲೆಯ ಮೇಲೆ ರೊಟ್ಟಿಯನ್ನ ಬೇಯಿಸಲು ಇಡುವ ಮುನ್ನ ರೊಟ್ಟಿಯ ಮೇಲೆ ಉಗುಳಿದ ಹಿನ್ನೆಲೆ 25 ವರ್ಷದ ವ್ಯಕ್ತಿಯನ್ನ ಬಂಧಿಸಲಾಗಿದೆ.
ಬಂಧಿತ ವ್ಯಕ್ತಿಯನ್ನ ಖಾಲಿಕ್​​ ಎಂದು ಗುರುತಿಸಲಾಗಿದೆ. ಈತ ಬಿಹಾರದ ಕಿಶನ್​ಗಂಜ್​ ಜಿಲ್ಲೆಯ ನಿವಾಸಿಯಾಗಿದ್ದಾನೆ.

ಈತ ರೊಟ್ಟಿಯ ಮೇಲೆ ಉಗುಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್​ ಆದ ಬಳಿಕ ಪೊಲೀಸರು ಈತನನ್ನ ಬಂಧಿಸಿದ್ದಾರೆ.

ವಿಡಿಯೋವನ್ನ ನೋಡ್ತಿದ್ರೆ ಈ ಯುವಕ ಯಾವುದೋ ಸಮಾರಂಭದಲ್ಲಿ ಅತಿಥಿಗಳಿಗೆ ಆಹಾರ ತಯಾರಿಸುತ್ತಿದ್ದಂತೆ ಕಾಣುತ್ತಿದೆ. ರೊಟ್ಟಿಯನ್ನ ನಾದಿದ ಬಳಿಕ ಅದರ ಮೇಲೆ ಉಗಿದು ಬಳಿಕ ಒಲೆಯ ಮೇಲಿಟ್ಟು ಬೇಯಿಸಿದ್ದಾನೆ. ಕಳೆದ ತಿಂಗಳು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...