alex Certify ಗೆಳತಿಯನ್ನ ಹತ್ಯೆಗೈದು ಗೋಡೆಯಲ್ಲಿ ಅವಿತಿಟ್ಟ ಪಾಪಿ ಅಂದರ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳತಿಯನ್ನ ಹತ್ಯೆಗೈದು ಗೋಡೆಯಲ್ಲಿ ಅವಿತಿಟ್ಟ ಪಾಪಿ ಅಂದರ್..​..!

ತಾನು ಸಂಬಂಧ ಹೊಂದಿದ್ದ ಮಹಿಳೆಯನ್ನ ಕೊಲೆ ಮಾಡಿ ಆಕೆಯ ಶವವನ್ನ ಫ್ಲ್ಯಾಟ್​ನ ಗೋಡೆಯಲ್ಲಿ ಅಡಗಿಸಿ ಇಟ್ಟಿದ್ದ 30 ವರ್ಷದ ಆರೋಪಿಯನ್ನ ಬಂಧಿಸಿದ ಘಟನೆ ಮಹಾರಾಷ್ಟ್ರದ ಪಲ್ಘಾರ್​ ಜಿಲ್ಲೆಯಲ್ಲಿ ನಡೆದಿದೆ. 32 ವರ್ಷದ ಮಹಿಳೆ ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದಳು ಎಂಬ ಕಾರಣಕ್ಕೆ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್​ನಲ್ಲಿ ಈ ಕೊಲೆ ನಡೆದಿದ್ದು ಫ್ಲ್ಯಾಟ್​ನ ಗೊಡೆಯಿಂದ ಮಹಿಳೆಯ ಅಸ್ಥಿಪಂಜರವನ್ನ ಹೊರತೆಗೆಯಲಾಗಿದೆ. ಬಂಧಿತ ಆರೋಪಿ ಹಾಗೂ ಕೊಲೆಯಾದ ಮಹಿಳೆ ಕಳೆದ 5 ವರ್ಷಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಕೊಲೆಯಾದ ಮಹಿಳೆ ಆರೋಪಿಯ ಜೊತೆ ಕೊನೆಯ ಬಾರಿಗೆ ಅಕ್ಟೋಬರ್​ 21 ನೇ ತಾರೀಖಿನಂದು ಕಾಣಿಸಿಕೊಂಡಿದ್ದಳು ಎಂದು ಪೊಲೀಸ್​ ಅಧಿಕಾರಿ ಹೇಳಿದ್ದಾರೆ.

ಮಹಿಳೆಯ ಕುಟುಂಬಸ್ಥರು ಆಕೆ ಎಲ್ಲಿದ್ದಾಳೆ ಎಂದು ಆರೋಪಿಯ ಬಳಿ ಕೇಳಿದ್ರೆ ಆತ ಆಕೆ ಗುಜರಾತ್​ನ ವಾಪಿಗೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿಕೊಂಡು ಬರ್ತಿದ್ದ ಎನ್ನಲಾಗಿದೆ. ಇದರಿಂದ ಅನುಮಾನಗೊಂಡ ಆಕೆಯ ಕುಟುಂಬಸ್ಥರು ಪೊಲೀಸ್​ ಕೇಸ್​ ದಾಖಲಿಸಿದ ಬಳಿಕ ಸತ್ಯಾಂಶ ಬೆಳಕಿಗೆ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...