alex Certify ಕರ್ತವ್ಯ ನಿಷ್ಠೆ ಅಂದರೆ ಇದು….! ಅನಾಥ ಶವಕ್ಕೆ ಹೆಗಲು ಕೊಟ್ಟ ಮಹಿಳಾ ಎಸ್​ಐ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ತವ್ಯ ನಿಷ್ಠೆ ಅಂದರೆ ಇದು….! ಅನಾಥ ಶವಕ್ಕೆ ಹೆಗಲು ಕೊಟ್ಟ ಮಹಿಳಾ ಎಸ್​ಐ

ಆಂಧ್ರ ಪ್ರದೇಶದ ಶ್ರೀಕಕುಲಂ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಸಾಗಿಸಲು ಹೆಗಲು ನೀಡಿದ್ದು ಮಾತ್ರವಲ್ಲದೇ ಆತನ ಅಂತ್ಯಕ್ರಿಯೆಗೂ ನೆರವಾದ ಮಹಿಳಾ ಸಬ್​ ಇನ್ಸ್​ಪೆಕ್ಟರ್​ ಕರ್ತವ್ಯ ನಿಷ್ಟೆಗೆ ಆಂಧ್ರಪ್ರದೇಶ ಡಿಜಿಪಿ ಗೌತಮ್​ ಸಾವಂಗ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಸಿಬುಗ್ಗಾ ಠಾಣೆಯ ಮಹಿಳಾ ಸಬ್​ ಇನ್ಸ್​ಪೆಕ್ಟರ್​ ಆಗಿರುವ ಸಿರಿಶಾ, ಅಡಿವಿಕೊಟ್ಟೂರು ಗ್ರಾಮದಲ್ಲಿ ಸಿಕ್ಕಿದ್ದ ಅಪರಿಚಿತ ಶವವನ್ನ ಬರೋಬ್ಬರಿ 2 ಕಿಲೋಮೀಟರ್​ ದೂರದವರೆಗೆ ಸಾಗಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಸುದ್ದಿ ಮಾಡಿದೆ.

ಮಹಿಳಾ ಅಧಿಕಾರಿ ಶವಕ್ಕೆ ಹೆಗಲು ಕೊಟ್ಟ ವೇಳೆ ಅಲ್ಲೇ ಇದ್ದ ಸ್ಥಳೀಯರು ನೀವು ಶವ ಸಾಗಿಸಬೇಡಿ ಎಂದು ಕೇಳಿಕೊಂಡಿದ್ದಾರೆ. ಆದರೂ ಆಕೆ ಗ್ರಾಮಸ್ಥರಿಗೆ ಶವವನ್ನ ಸಾಗಿಸಲು ನೆರವಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...