alex Certify ಲಾಕ್ಡೌನ್ ನಡುವೆ ಪತಿ ಸಾಹಸಕ್ಕೆ ಕೈಜೋಡಿಸಿದ ಪತ್ನಿ, ಸೋಜಿಗದ ಸಂಗತಿ ಕಂಡು ಮೊದಲು ವ್ಯಂಗ್ಯವಾಡಿದವರಿಗೇ ಅಚ್ಚರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ಡೌನ್ ನಡುವೆ ಪತಿ ಸಾಹಸಕ್ಕೆ ಕೈಜೋಡಿಸಿದ ಪತ್ನಿ, ಸೋಜಿಗದ ಸಂಗತಿ ಕಂಡು ಮೊದಲು ವ್ಯಂಗ್ಯವಾಡಿದವರಿಗೇ ಅಚ್ಚರಿ…!

ಮುಂಬೈ: ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಕರ್ ಖೇಡಾ ದಂಪತಿ ಲಾಕ್ ಡೌನ್ ವೇಳೆ ಮನೆ ಬಳಿ ಬಾವಿ ತೋಡುವ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ.

ಗಜಾನನ ಮತ್ತು ಪುಷ್ಪಾ ದಂಪತಿ ಕಳೆದ ತಿಂಗಳು ಲಾಕ್ಡೌನ್ ಜಾರಿಯಾದ ವೇಳೆ ಮನೆಯಲ್ಲಿ ಕುಳಿತು ಏನು ಮಾಡುವುದೆಂದು ಮನೆ ಸಮೀಪದ ಖಾಲಿ ಜಾಗದಲ್ಲಿ ಬಾವಿ ತೋಡಲು ಶುರುಮಾಡಿದ್ದಾರೆ. ಸುಮಾರು 25 ಅಡಿ ಆಳ ಬಾವಿ ತೋಡಿದ್ದು, ನೀರು ಜಿನುಗಿದೆ.

ಮೇಸ್ತ್ರಿಯಾಗಿರುವ ಗಜಾನನ ಅವರು ತಮ್ಮ ಕೌಶಲ್ಯವನ್ನು ಬಳಸಿಕೊಂಡು ಪತ್ನಿ ಜೊತೆಗೆ ಬಾವಿ ತೊಡಿದ್ದು, ದಂಪತಿಗೆ ಇಬ್ಬರು ಮಕ್ಕಳು ಕೂಡ ಸಾಥ್ ನೀಡಿದ್ದಾರೆ. 21 ದಿನದ ಪ್ರಯತ್ನದ ನಂತರ 25 ಅಡಿ ಆಳದ ಬಾವಿಯಲ್ಲಿ ನೀರು ಉಕ್ಕಿ ಬಂದಿದೆ. ಯಾವುದೇ ಯಂತ್ರೋಪಕರಣಗಳನ್ನು ಬಳಸದೆ ಬಾವಿ ತೋಡಲಾಗಿದೆ.

ಮೊದಲಿಗೆ ಇವರನ್ನು ಅಪಹಾಸ್ಯ ಮಾಡಿದ ನೆರೆಹೊರೆಯವರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಲ್ಲದೇ, ದಂಪತಿಯ ಕಾರ್ಯವನ್ನು ಕೊಂಡಾಡಿದ್ದಾರೆ. ಗಜಾನನ ದಂಪತಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...