alex Certify ಹುಚ್ಚು ಪ್ರೀತಿ…! ಮದುವೆಯಾಗಲು 80 ಕಿಲೋಮೀಟರ್ ನಡೆದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಚ್ಚು ಪ್ರೀತಿ…! ಮದುವೆಯಾಗಲು 80 ಕಿಲೋಮೀಟರ್ ನಡೆದ ಯುವತಿ

19 ವರ್ಷದ ಯುವತಿಯೊಬ್ಬಳು ಕರೋನಾ ವೈರಸ್ ಲಾಕ್ಡೌನ್ ನಡುವೆ ಮದುವೆಯಾಗುವ ಉದ್ದೇಶದಿಂದ ಬರೋಬ್ಬರಿ 80 ಕಿಲೋಮೀಟರ್ ಕಾಲು ನಡಿಗೆಯಲ್ಲಿ ಸಾಗಿದ್ದಾಳೆ.

ಈ ‘ಬಸಂತಿ’ ಕಾನ್ಪುರ ನ ಜಿಲ್ಲೆಯ ದೇರಾ ಮಂಗಲ್ಪುರ ಬ್ಲಾಕ್‌ ‌ನ ಲಕ್ಷ್ಮಣ್ ತಿಲಕ್ ಗ್ರಾಮದ ಗೋಲ್ಡಿ ಎನ್ನಲಾಗಿದೆ. ವೀರು ಎಂಬುವರೊಂದಿಗೆ ಕೆಲ ದಿನಗಳ ಹಿಂದೆ ಈಕೆಯ ವಿವಾಹ ನಿಶ್ಚಿತಾರ್ಥವಾಗಿತ್ತು. ಮೇ 4 ರಂದು ವಿವಾಹ ನಿಗದಿಯಾಗಿತ್ತು. ಆದರೆ ಲಾಕ್ಡೌನ್ ಕಾರಣ ಮುಂದೂಡಲ್ಪಟ್ಟಿತ್ತು.

ಶುಭ ಮುಹೂರ್ತ ತಪ್ಪಿದ ಬೇಸರದಲ್ಲಿ ಗೋಲ್ಡಿ, 80 ಕಿಲೋಮೀಟರ್ ದೂರದ ವರನ ಮನೆಗೆ ಆಕೆಯೊಬ್ಬಳೇ ನಡೆದುಕೊಂಡು ಹೊರಟಳು.

ಸಂಜೆ ವರನ ಮನೆಯವರಿಗೆ ಗೋಲ್ಡಿಯನ್ನು ಕಂಡು ಆಶ್ಚರ್ಯವಾಯಿತು, ಬಳಿಕ ಆಕೆಯನ್ನು ಮನವೊಲಿಸಲು ಪ್ರಯತ್ನಿಸಿದರು. ಬ್ಯಾಂಡ್, ಬಾಜಾದೊಂದಿಗೆ ಬರುವಿಯಂತೆ ಎಂದು ಹೇಳಿದರೂ ಆಕೆ ಕೇಳಲಿಲ್ಲ. ಕೊನೆಗೆ ವಧು-ವರರ ಮನೆಯವರು ಆಕೆಯ ಹಠಕ್ಕೆ ತಲೆ ಬಾಗಲೇಬೇಕಾಯಿತು. ಮದುವೆ ಮಾಡಲೇಬೇಕಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...