alex Certify ಮಗು ಹೆತ್ತು ಎರಡು ಗಂಟೆಯಲ್ಲಿ ಮತ್ತೆ ಕಾಲ್ನಡಿಗೆ ಶುರು ಮಾಡಿದ ಕಾರ್ಮಿಕ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗು ಹೆತ್ತು ಎರಡು ಗಂಟೆಯಲ್ಲಿ ಮತ್ತೆ ಕಾಲ್ನಡಿಗೆ ಶುರು ಮಾಡಿದ ಕಾರ್ಮಿಕ ಮಹಿಳೆ

ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಸಾರ್ವಜನಿಕ ಬಸ್, ರೈಲು ಸಂಚಾರ ರದ್ದಾಗಿರುವ ಕಾರಣ ಕೆಲಸಕ್ಕೆಂದು ಬೇರೆ ಊರಿಗೆ ಬಂದಿದ್ದ ಕಾರ್ಮಿಕರು ಕಾಲ್ನಡಿಗೆಯಲ್ಲಿ ಊರು ತಲುಪುವ ಪ್ರಯತ್ನ ನಡೆಸಿದ್ದಾರೆ. ಈಗ ಮಹಾರಾಷ್ಟ್ರದಿಂದ ಮಧ್ಯಪ್ರದೇಶದ ಸತ್ನಾ ಜಿಲ್ಲೆಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಗರ್ಭಿಣಿ ದಾರಿ ಮಧ್ಯೆ ಮಗುವಿಗೆ ಜನ್ಮ ನೀಡಿದ್ದಾಳೆ.

ಕಾರ್ಮಿಕರ ಗುಂಪಲ್ಲಿ ಇಬ್ಬರು ಗರ್ಭಿಣಿಯರಿದ್ದರು. ಶಕುಂತಲಾ 9 ತಿಂಗಳ ಗರ್ಭಿಣಿ. ನಾಸಿಕ್ ಗಿಂತ ಸ್ವಲ್ಪ ದೂರದಲ್ಲಿ ಶಕುಂತಲಾಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ದಾರಿಯಲ್ಲಿ ಆಸ್ಪತ್ರೆಯಿರದ ಕಾರಣ ಉಳಿದ ಮಹಿಳೆಯರು ಶಕುಂತಲಾಗೆ ಹೆರಿಗೆ ಮಾಡಿಸಿದ್ದಾರೆ. ಶಕುಂತಲಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಶಕುಂತಲಾಗೆ ಮೊದಲೇ ನಾಲ್ಕು ಮಕ್ಕಳಿವೆ. ಇದು ಐದನೇ ಮಗು. ಹೆರಿಗೆಯಾದ 2 ಗಂಟೆ ನಂತ್ರ ಮತ್ತೆ ಕಾಲ್ನಡಿಗೆ ಶುರು ಮಾಡಿದ ಶಕುಂತಲಾ ಭಾನುವಾರ ಊರು ತಲುಪಿದ್ದಾಳೆ. ಹೆರಿಗೆ ಮೊದಲು 70 ಕಿಲೋಮೀಟರ್ ಹಾಗೂ ಹೆರಿಗೆ ನಂತ್ರ 160 ಕಿಲೋಮೀಟರ್ ನಡೆದಿದ್ದಾಳೆ ತಾಯಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...