ಭಾರತವು ಕೊರೊನಾ 2ನೆ ಅಲೆಯನ್ನ ಎದುರಿಸುತ್ತಿದೆ. ಕೊರೊನಾದಿಂದ ಸಾವಿಗೀಡಾಗುತ್ತಿರುವವರು ಒಂದೆಡೆಯಾದರೆ ಕೋವಿಡ್ ವಿರುದ್ಧ ಸೆಣಸಾಡಿ ಜಯಿಸಿದವರೂ ನಮ್ಮಲ್ಲಿದ್ದಾರೆ. ಇದೇ ರೀತಿ ಮಧ್ಯ ಪ್ರದೇಶದ ನರ್ಸ್ ಒಬ್ಬರು ಕೋವಿಡ್ನಿಂದ ಪಾರಾದ ಘಟನೆ ಸ್ಪೂರ್ತಿದಾಯಕವಾಗಿದೆ.
ಮಧ್ಯಮ ವಯಸ್ಸಿನ ಮಹಿಳಾ ನರ್ಸ್ ಒಂದೇ ಶ್ವಾಸಕೋಶವನ್ನ ಹೊಂದಿದ್ದರೂ ಸಹ ಕೋವಿಡ್ ವಿರುದ್ಧ ಜಯಶಾಲಿಯಾಗಿದ್ದಾರೆ.
39 ವರ್ಷದ ಪ್ರಫುಲಿತ್ ಪೀಟರ್ ಚಿಕ್ಕ ವಯಸ್ಸಿನಲ್ಲಾದ ಅಪಘಾತದಿಂದ ಒಂದು ಶ್ವಾಸಕೋಶವನ್ನ ಕಳೆದುಕೊಂಡಿದ್ದರು. ಮಧ್ಯ ಪ್ರದೇಶದ ತಿಕಾಂಗರ್ ನಗರ ಆಸ್ಪತ್ರೆಯಲ್ಲಿ ಇವರನ್ನ ಕೋವಿಡ್ ವಾರ್ಡ್ಗೆ ಹಾಕಲಾಗಿತ್ತು. ಇಲ್ಲಿಂದ ಸೋಂಕಿಗೀಡಾದ ಪ್ರಫುಲ್ಲಿತ್ ಚಿಕಿತ್ಸೆಗೆ ಒಳಗಾದರು. ಒಂದೇ ಒಂದು ಶ್ವಾಸಕೋಶ ಹೊಂದಿದ್ದ ಈಕೆ ಕೋವಿಡ್ನಿಂದ ಪಾರಾಗೋದು ಸುಲಭದ ಕೆಲಸವಂತೂ ಆಗಿರಲಿಲ್ಲ.
ಕೋವಿಡ್ ಸೋಂಕಿತರಿಗಾಗಿ ಆಟೋದಲ್ಲೇ ಅಂಬುಲೆನ್ಸ್ ಸೇವೆ
ತನಗೆ ಸೋಂಕಿದೆ ಎಂದು ತಿಳಿದ ತಕ್ಷಣ ಪೀಟರ್ ಐಸೋಲೇಷನ್ಗೆ ಒಳಗಾದರು. ಅಲ್ಲದೇ ನಿತ್ಯ ಯೋಗಾಸನ, ಪ್ರಾಣಾಯಾಮ, ಉಸಿರಾಟ ಸಂಬಂಧಿ ವ್ಯಾಯಾಮ ಹಾಗೂ ಬಲೂನುಗಳನ್ನ ಊದುವ ಮೂಲಕ ಶ್ವಾಸಕೋಶದ ಆರೋಗ್ಯವನ್ನ ಸುಧಾರಿಸಿದರು. ಕೊರೊನಾ ಲಸಿಕೆಯ ಎರಡೂ ಡೋಸ್ಗಳನ್ನ ಪಡೆದ ಬಳಿಕ ಪೀಟರ್ ಸೋಂಕಿಗೆ ಒಳಗಾಗಿದ್ದರು.