alex Certify ಪತ್ನಿಯೊಂದಿಗಿನ ಸರಸ – ಸಲ್ಲಾಪದ ದೃಶ್ಯ ಲೈವ್ ನಲ್ಲಿ ಹರಿಬಿಟ್ಟ ಕಿಡಿಗೇಡಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯೊಂದಿಗಿನ ಸರಸ – ಸಲ್ಲಾಪದ ದೃಶ್ಯ ಲೈವ್ ನಲ್ಲಿ ಹರಿಬಿಟ್ಟ ಕಿಡಿಗೇಡಿ ಅರೆಸ್ಟ್

ವಿದಿಶಾ: ಮಧ್ಯಪ್ರದೇಶದ ವಿದಿಶಾದಲ್ಲಿ ಪತ್ನಿಯೊಂದಿಗಿನ ಸರಸದ ದೃಶ್ಯಗಳನ್ನು ನೇರಪ್ರಸಾರ ಮಾಡಿ ಹಣ ಗಳಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಚರಣ್ ಜಿತ್ ಬಂಧಿತ ಆರೋಪಿಯಾಗಿದ್ದಾನೆ. ವಿದಿಶಾ ಮುಖ್ಯ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಪಾಂಡೆ ಈ ಕುರಿತು ಮಾಹಿತಿ ನೀಡಿದ್ದು, ಚರಣ್ ಜಿತ್ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯಗಳನ್ನು ನೇರಪ್ರಸಾರದ ದೃಶ್ಯಗಳನ್ನು ಹಂಚಿಕೊಳ್ಳುತ್ತಿದ್ದ. ಇದಕ್ಕೆ ಹಣ ಪಡೆದುಕೊಳ್ಳುತ್ತಿದ್ದ ಎಂದು ತಿಳಿಸಿದ್ದಾರೆ.

ಆತನ ಪತ್ನಿ ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಈ ಮೊದಲೇ ಮದುವೆಯಾಗಿದ್ದ ಚರಣ್ ಜಿತ್ ತನಗೂ ಆಮಿಷವೊಡ್ಡಿ ವಿದಿಶಾಗೆ ಕರೆದುಕೊಂಡು ಬಂದು ಮದುವೆಯಾಗಿದ್ದಾನೆ. ಲೈಂಗಿಕಕ್ರಿಯೆ ದೃಶ್ಯಗಳನ್ನು ಆಪ್ ಮೂಲಕ ಹಂಚಿಕೊಳ್ಳುತ್ತಿದ್ದ ಆತ ಇದಕ್ಕಾಗಿ ಹಣ ಪಡೆದುಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾಳೆ.

ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಪ್ಲಿಕೇಶನ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದ ಆರೋಪಿಯಿಂದ ಲಕ್ಷಾಂತರ ರೂಪಾಯಿ ನಗದು, 4 ಮೊಬೈಲ್ ಜಪ್ತಿ ಮಾಡಲಾಗಿದೆ. ವೀಕ್ಷಕರಿಂದ ಹಣ ಪಡೆದು ಲೈವ್ ಲೈಂಗಿಕ ಕ್ರಿಯೆ ನೋಡಲು ಅವಕಾಶ ನೀಡುತ್ತಿದ್ದ. ಈ ಆಪ್ ಮೂಲಕ ಆತ ಹಣ ಗಳಿಸುತ್ತಿದ್ದ ಎಂದು ಹೇಳಲಾಗಿದ್ದು, ತನಿಖೆ ಮುಂದಿವರೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...