alex Certify 115 ವರ್ಷದಲ್ಲಿ ಮೊದಲ ಬಾರಿಗೆ ʼಬಂದ್ʼ ಆದ ಕಬಾಬ್ ಅಂಗಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

115 ವರ್ಷದಲ್ಲಿ ಮೊದಲ ಬಾರಿಗೆ ʼಬಂದ್ʼ ಆದ ಕಬಾಬ್ ಅಂಗಡಿ

ಲಖನೌ: ಈ ಕಬಾಬ್ ಅಂಗಡಿ ಲಖನೌ ನಗರದ ಹೆಮ್ಮೆ. ತಮ್ಮ ರುಚಿಯಾದ ಕಬಾಬ್ ನಿಂದಾಗಿ ಸಾಕಷ್ಟು ಪ್ರಸಿದ್ದಿ ಪಡೆದಿದ್ದ “ಟುಂಡೆ ಕಬಾಬ್” 115 ವರ್ಷದಲ್ಲಿ ಮೊದಲ ಬಾರಿಗೆ ರಂಜಾನ್ ತಿಂಗಳಿನಲ್ಲಿ ಬಂದ್ ಆಗಿದೆ. ಕಾರಣ ಕರೋನಾ ಲಾಕ್‌ ಡೌನ್.

1905 ಶುರುವಾದ ಈ ಮಳಿಗೆಯನ್ನು ಈಗ ಮೂರನೇ ಪೀಳಿಗೆ ನಡೆಸುತ್ತಿದ್ದು, ಮೊಹಮ್ಮದ್ ಉಸ್ಮಾನ್ ತನ್ನ ಅಜ್ಜನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.”ನಮ್ಮ ಕಬಾಬ್ ಶಾಪ್ ಗೆ ಗ್ರಾಹಕರು ಬರಲು ಆಗುತ್ತಿಲ್ಲ ಎಂದು ಬಹಳ ಬೇಸರವಾಗಿದೆ” ಎಂದು ಮೊಹಮ್ಮದ್ ತಿಳಿಸಿದ್ದಾರೆ.

ಮುಸಲ್ಮಾನರ ಪವಿತ್ರ ರಂಜಾನ್ ತಿಂಗಳು ಪ್ರಾರಂಭವಾಗಿದ್ದು, ಉಪವಾಸ ಮುಗಿದ ನಂತರ ಇಪ್ತಿಯಾರ್ ಕೂಟವನ್ನು ಎಲ್ಲರೂ ಸೇರಿ ಆಚರಿಸುತ್ತಾರೆ. ಆಗ ಎಲ್ಲರೂ ಕೂಡಿ ಸ್ವಾದಿಷ್ಟ ಭೋಜನ ಸವಿಯುತ್ತಾರೆ. ಆದರೆ, ಈ ವರ್ಷ ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಹಬ್ಬವನ್ನು ಆಚರಿಸುವ ಹಾಗಾಗಿದೆ. ಇದರಿಂದ ಹಲವರು ತಮ್ಮ ಆದಾಯವನ್ನು ಕಳೆದುಕೊಂಡಿದ್ದಾರೆ. ಅದರಲ್ಲಿ ಲಖನೌನ ಟುಂಡೆ ಕಬಾಬ್ ಮಳಿಗೆಯು ಸಹ ಒಂದು. “ಈ ಕಬಾಬ್ ಶಾಪ್ ನಮ್ಮ ಹಮ್ಮೆ. ನಾವು ಇಲ್ಲಿಯ ರುಚಿಯಾದ ಕಬಾಬ್ ಗಳನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆʼʼ ಎಂದು ಲಖನೌದ ವಾಸಿಯೊಬ್ಬರು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...