alex Certify BREAKING NEWS: ಆರ್.ಟಿ.ಪಿ.ಎಸ್ ವಿದ್ಯುತ್ ಉತ್ಪಾದನಾ ಕೇಂದ್ರದ 4 ಘಟಕಗಳು ಬಂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಆರ್.ಟಿ.ಪಿ.ಎಸ್ ವಿದ್ಯುತ್ ಉತ್ಪಾದನಾ ಕೇಂದ್ರದ 4 ಘಟಕಗಳು ಬಂದ್

ರಾಯಚೂರು: ಆರ್.ಟಿ.ಪಿ.ಎಸ್.ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ನಾಲ್ಕು ಘಟಗಳನ್ನು ಬಂದ್ ಮಾಡಲಾಗಿದೆ.

ರಾಯಚೂರಿನ ಶಕ್ತಿ ನಗರದಲ್ಲಿರುವ ಆರ್.ಟಿ.ಪಿ.ಎಸ್.ಘಟಕದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, 8 ಘತಕಗಳ ಪೈಕಿ 4 ಘಟಕಗಳನ್ನು ಬಂದ್ ಮಾಡಲಾಗಿದೆ. 2 ಘಟಕಗಳ ದುರಸ್ತಿ ಕಾರ್ಯ ನಡೆಯುತ್ತಿದೆ.

ರಾಜ್ಯಕ್ಕೆ ಸುಮಾರು 40% ವಿದ್ಯುತ್ ಪೂರೈಕೆ ಮಾಡುವ ಆರ್.ಟಿ.ಪಿ.ಎಸ್ ವಿದ್ಯುತ್ ಉತ್ಪಾದನಾ 4 ಘಟಕಗಳು ಕಳೆದ ಎರಡು ದಿನಗಳಿಂದ ಬಂದ್ ಆಗಿವೆ. ಬಾಯ್ಲರ್ ಟ್ಯೂಬ್ ಲೀಕೇಜ್ ಹಾಗೂ ಬಂಕ್ಲರ್ ಸಮಸ್ಯೆ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದು, ಸದ್ಯ 2 ಮತ್ತು 6 ನೇ ಘಟಕಗಳ ದುರಸ್ತಿ ಕಾರ್ಯ ನಡೆಯುತ್ತಿದೆ. 1720 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಆರ್.ಟಿ.ಪಿ.ಎಸ್ ಹೊಂದಿದೆ. 4 ಘಟಕಗಳು ಬಂದ್ ಆಗಿರುವುದರಿಂದ 903 ಮೆ.ವ್ಯಾ ವಿದ್ಯುತ್ ಉತ್ಪಾದನೆಯಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...