alex Certify ಲಾಕ್ಡೌನ್ ನಿಂದ ತತ್ತರಿಸಿದ ಜನತೆಗೆ ಗುಡ್ ನ್ಯೂಸ್: ಇಂದಿನಿಂದ ಹೊಸ ಜೀವನ – ದೇಗುಲ, ಮಾಲ್, ಹೋಟೆಲ್ ಸೇರಿ ಬಹುತೇಕ ಚಟುವಟಿಕೆ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ಡೌನ್ ನಿಂದ ತತ್ತರಿಸಿದ ಜನತೆಗೆ ಗುಡ್ ನ್ಯೂಸ್: ಇಂದಿನಿಂದ ಹೊಸ ಜೀವನ – ದೇಗುಲ, ಮಾಲ್, ಹೋಟೆಲ್ ಸೇರಿ ಬಹುತೇಕ ಚಟುವಟಿಕೆ ಆರಂಭ

ನವದೆಹಲಿ: ಜೂನ್ 30 ರ ವರೆಗೂ ಲಾಕ್ಡೌನ್ ಮುಂದುವರೆದಿದ್ದರೂ, ಅನೇಕ ಚಟುವಟಿಕೆಗಳ ಆರಂಭಕ್ಕೆ ಅವಕಾಶ ನೀಡಲಾಗಿದೆ.

ಇಂದಿನಿಂದ ಧಾರ್ಮಿಕ ಕೇಂದ್ರಗಳು, ಶಾಪಿಂಗ್ ಮಾಲ್, ಹೋಟೆಲ್, ಪ್ರವಾಸಿತಾಣ ಆರಂಭವಾಗಲಿವೆ. ಈಗಾಗಲೇ ರೈಲು, ಬಸ್, ಅಂಗಡಿಗಳು ಆರಂಭಗೊಂಡಿದ್ದು ಶೇಕಡ 98 ರಷ್ಟು ವಹಿವಾಟು ಪುನರಾರಂಭಗೊಳ್ಳಲಿದೆ. ಶಾಲೆ-ಕಾಲೇಜು, ಸಿನಿಮಾ, ಮೆಟ್ರೋ ರೈಲು, ವಿದೇಶಿ ವಿಮಾನ, ಸಭೆ-ಸಮಾರಂಭ, ಜಿಮ್ ಗಳನ್ನು ಬಂದ್ ಮಾಡಲಾಗಿದೆ.

ಮಾರ್ಗಸೂಚಿಗಳೊಂದಿಗೆ ವಾಣಿಜ್ಯ ಚಟುವಟಿಕೆಗಳ ಪ್ರಾರಂಭಕ್ಕೆ ಅನುಮತಿ ನೀಡಲಾಗಿದೆ. ಈಗಾಗಲೇ ದೇಗುಲಗಳಲ್ಲಿ ದೇವರ ದರ್ಶನಕ್ಕಾಗಿ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ. ಸೋಮವಾರದಿಂದ ಶೇಕಡ 98ರಷ್ಟು ಸೇವೆ ಮತ್ತು ಚಟುವಟಿಕೆಗಳು ಪ್ರಾರಂಭವಾಗಲಿದ್ದು, ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...