alex Certify ಮೇ 3 ರ ನಂತರ ಲಾಕ್ ಡೌನ್ ತೆರವು ನಿರೀಕ್ಷೆಯಲ್ಲಿದ್ದವರಿಗೆ ‘ಶಾಕ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇ 3 ರ ನಂತರ ಲಾಕ್ ಡೌನ್ ತೆರವು ನಿರೀಕ್ಷೆಯಲ್ಲಿದ್ದವರಿಗೆ ‘ಶಾಕ್’

ಮೇ 3 ರ ನಂತರ ಲಾಕ್ಡೌನ್ ನಿರ್ಬಂಧ ತೆರವಾಗಬಹುದೆಂಬ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಮೇ 3ರ ನಂತರವೂ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಪ್ರಧಾನಿ ಮೋದಿ ಸುಳಿವು ನೀಡಿದ್ದಾರೆ.

ರೆಡ್ ಜೋನ್ ಜಿಲ್ಲೆಗಳಿಗೆ ಮೇ 3ರ ನಂತರವೂ ಮುಕ್ತಿ ಇಲ್ಲ. ಲಾಕ್ ಡೌನ್ ನಿರ್ಬಂಧಗಳನ್ನು ಕೊಂಚ ಸಡಿಲಿಸಲು ಕೆಲವು ರಾಜ್ಯಗಳು ಸಲಹೆ ನೀಡಿದ್ದು ಮತ್ತೆ ಕೆಲವು ರಾಜ್ಯಗಳು ಲಾಕ್ಡೌನ್ ಮುಂದುವರಿಸುವಂತೆ ಮನವಿ ಮಾಡಿವೆ.

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ ಪ್ರಧಾನಿ ಮೋದಿ ಮೇ 3 ರ ನಂತರವೂ ರೆಡ್ ಜೋನ್ ಗಳಲ್ಲಿ ಲಾಕ್ಡೌನ್ ಮುಂದುವರೆಯಲಿದೆ. ಉಳಿದ ಜಿಲ್ಲೆಗಳಲ್ಲಿ ಆಯಾ ಮುಖ್ಯಮಂತ್ರಿಗಳು ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.

ಕೊರೋನಾ ಪ್ರಕರಣಗಳು ಹೆಚ್ಚಾಗಿರುವ ವಲಯದಲ್ಲಿ ಲಾಕ್ ಡೌನ್ ಮುಂದುವರೆಸಿ ಉಳಿದ ವಲಯಗಳಲ್ಲಿ ಹಂತ ಹಂತವಾಗಿ ಸಡಿಲಗೊಳಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಸೋಂಕು ಕಡೆಗೆ ಮಹತ್ವ ನೀಡುವ ಜೊತೆಗೆ ಆರ್ಥಿಕತೆಯತ್ತ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟಿರುವ ಮೋದಿ, ಕೆಂಪು-ಕಿತ್ತಳೆ ಹಾಗೂ ಹಸಿರು ವಲಯಗಳನ್ನು ಗುರುತಿಸಿ ಯೋಜನಾ ವರದಿಯನ್ನು ಸಲ್ಲಿಸುವಂತೆ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...