ಕೊರೊನಾ ವೈರಸ್ ಜಗತ್ತಿಗೆ ಬಂದು ಅಪ್ಪಳಿಸಿ ವರ್ಷಗಳೇ ಉರುಳಿದೆ. ಕೊರೊನಾ ವ್ಯಾಕ್ಸಿನೇಷನ್ ಡ್ರೈವ್ ಆರಂಭವಾಗಿದೆಯಾದರೂ ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳನ್ನ ಬಿಟ್ಟಿರದ ಅನಿವಾರ್ಯ ಸ್ಥಿತಿ ಇಂದಿಗೂ ಇದೆ.
ಅಂಗಡಿಗಳಲ್ಲಂತೂ ಸ್ಯಾನಿಟೈಸರ್ ಸ್ಟೇಷನ್ಗಳನ್ನೇ ಇಡಲಾಗ್ತಿದೆ. ಪುಟಾಣಿ ಬಾಲಕಿಯೊಬ್ಬಳು ಕಣ್ಣಿಗೆ ಕಾಣುವ ವಸ್ತುಗಳೆಲ್ಲವೂ ಸ್ಯಾನಿಟೈಸರ್ ಸ್ಟೇಷನ್ ಎಂದುಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಈ ಪುಟಾಣಿ ಕಂದಮ್ಮನ ತಾಯಿ ವಿಡಿಯೋವನ್ನ ಚಿತ್ರೀಕರಿಸಿದ್ದಾರೆ. ಇದರಲ್ಲಿ ಮಗು ಇಟ್ಟಿಗೆ, ದಾರಿದೀಪ ಹೀಗೆ ಕಂಡ ಕಂಡ ವಸ್ತುಗಳನ್ನೆಲ್ಲ ಸ್ಯಾನಿಟೈಸರ್ ಎಂದು ಭಾವಿಸುತ್ತಿರೋದನ್ನ ಕಾಣಬಹುದಾಗಿದೆ. 2020ರಲ್ಲಿ ಹುಟ್ಟಿದವರಿಗೆ ಜಗತ್ತಲ್ಲಿ ಏನನ್ನ ನೋಡಿದ್ರೂ ಸ್ಯಾನಿಟೈಸರ್ ಕಂಡಂತೆ ಭಾಸವಾಗುತ್ತೆ ಎಂದು ಮಗುವಿನ ತಾಯಿ ಬರೆದುಕೊಂಡಿದ್ದಾರೆ.
https://www.facebook.com/NTDTelevision/videos/155052549547723/?t=1