
ಪುಟಾಣಿ ಮಕ್ಕಳ ಮುಗ್ಧತೆ ಹಾಗೂ ಪ್ರಾಣಿಗಳ ನಿಷ್ಕಲ್ಮಶ ಮನಸ್ಸುಗಳು ಒಂದೆಡೆ ಸೇರಿದರೆ ಅದನ್ನು ನೋಡುವುದು ಒಂಥರಾ ಖುಷಿ.
ಎರಡು ವರ್ಷ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಪುಟಾಣಿ ಪೋರನೊಬ್ಬ ಪಕ್ಷಿಗಳಿಗೆ ಕಾಳು ತಿನಿಸುತ್ತಿರುವ ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಶೇರ್ ಮಾಡಿಕೊಂಡಿದ್ದಾರೆ.
“ಹೃದಯವನ್ನು ಶಿಕ್ಷಿತಗೊಳಿಸದೇ, ಮನಸ್ಸನ್ನು ಶಿಕ್ಷಿತಗೊಳಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ನಾವು ಹುಟ್ಟಿರುವುದು ಪ್ರೀತಿ ಮಾಡಲು ಎಂದು ಮಕ್ಕಳಿಗೆ ಕಲಿಸೋಣ” ಎಂಬ ಕ್ಯಾಪ್ಷನ್ ಅನ್ನು ಈ ಪೋಸ್ಟ್ನೊಂದಿಗೆ ನಂದಾ ಹಾಕಿದ್ದಾರೆ.