alex Certify ಇಳಿದೇ ಹೋಯ್ತು ಕಿಕ್: ಬಿಸಿ ತುಪ್ಪವಾಯ್ತು ಮದ್ಯ, ಶೇಕಡ 75 ರಷ್ಟು ಹೆಚ್ಚಾಯ್ತು ದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಳಿದೇ ಹೋಯ್ತು ಕಿಕ್: ಬಿಸಿ ತುಪ್ಪವಾಯ್ತು ಮದ್ಯ, ಶೇಕಡ 75 ರಷ್ಟು ಹೆಚ್ಚಾಯ್ತು ದರ

ದೆಹಲಿ ಸರ್ಕಾರ ಮದ್ಯದ ಮೇಲೆ ಬರೋಬ್ಬರಿ ಶೇಕಡ 70 ರಷ್ಟು ಕೊರೋನಾ ವಿಶೇಷ ತೆರಿಗೆ ಹಾಕುವ ಮೂಲಕ ಕುಡುಕರ ಕಿಕ್ ಇಳಿಸಿದೆ.

ಅದೇ ರೀತಿ ಆಂಧ್ರಪ್ರದೇಶ ಸರ್ಕಾರ ಮದ್ಯದ ದರವನ್ನು ಶೇಕಡಾ 75 ರಷ್ಟು ಏರಿಕೆ ಮಾಡಿದೆ. ಮಂಗಳವಾರ ಶೇಕಡ 50 ರಷ್ಟು ಮದ್ಯದ ದರ ಹೆಚ್ಚಳವಾಗುವುದರೊಂದಿಗೆ ಮದ್ಯದ ಬೆಲೆ ಶೇಕಡ 75 ರಷ್ಟು ಹೆಚ್ಚಳವಾಗಿದೆ. ಮೇ 4ರಿಂದ ಲಾಕ್ಡೌನ್ ಸಡಿಲಗೊಂಡಿದ್ದು ಸೋಮವಾರದಿಂದ ಮದ್ಯ ಮಾರಾಟ ಮಳಿಗೆ ಆರಂಭವಾಗಿವೆ. ಈ ವೇಳೆ ಮದ್ಯದ ದರವನ್ನು ಶೇಕಡ 25 ರಷ್ಟು ಹೆಚ್ಚಳ ಮಾಡಿದ ಆಂಧ್ರಪ್ರದೇಶ ಸರ್ಕಾರ ಮಂಗಳವಾರ ದಿಢೀರನೆ ಶೇಕಡ 50 ರಷ್ಟು ದರ ಹೆಚ್ಚಳ ಮಾಡುವ ಮೂಲಕ ಶಾಕ್ ನೀಡಿದೆ.

ಮದ್ಯ ಸೇವನೆ ಪ್ರಮಾಣ ಕಡಿಮೆ ಮಾಡುವುದು ಮತ್ತು ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಮದ್ಯದ ಬೆಲೆ ಹೆಚ್ಚಳ ಮಾಡಿದೆ ಎಂದು ಆಂಧ್ರಪ್ರದೇಶ ವಿಶೇಷ ಮುಖ್ಯಕಾರ್ಯದರ್ಶಿ(ರೆವಿನ್ಯೂ) ರಜತ್ ಭಾರ್ಗವ ತಿಳಿಸಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಆಂಧ್ರಪ್ರದೇಶದಲ್ಲಿ ಮದ್ಯ ಮಾರಾಟ ಮಳಿಗೆಗಳು ಓಪನ್ ಇರಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...