alex Certify ಮದ್ಯ ಪ್ರಿಯರಿಗೆ ಶುಭ ಸುದ್ದಿ: ನಾಳೆಯಿಂದ ಮನೆ ಬಾಗಿಲಿಗೆ ಮದ್ಯ ಪೂರೈಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ಪ್ರಿಯರಿಗೆ ಶುಭ ಸುದ್ದಿ: ನಾಳೆಯಿಂದ ಮನೆ ಬಾಗಿಲಿಗೆ ಮದ್ಯ ಪೂರೈಕೆ

ಮುಂಬೈ: ಕೊರೋನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯುವ ಉದ್ದೇಶದಿಂದ ಮೇ 15 ರಿಂದ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲು ಮಹಾರಾಷ್ಟ್ರ ಅಬಕಾರಿ ಇಲಾಖೆ ತಿರ್ಮಾನಿಸಿದೆ.

ಮದ್ಯದ ಅಂಗಡಿಗಳ ಎದುರು ಜನ ದಟ್ಟಣೆ ಉಂಟಾಗಿ ಸೋಂಕು ವ್ಯಾಪಕವಾಗಿ ಹರಡಬಹುದು ಎಂಬ ಕಾರಣಕ್ಕೆ ಕಂಟೇನ್ಮೆಂಟ್ ವಲಯಕ್ಕೆ ಸೇರಿದ ಪ್ರದೇಶಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲಾಗುವುದು. ಈ ಕುರಿತಾಗಿ ಆದೇಶ ಹೊರಡಿಸಲಾಗಿದೆ.

ಮದ್ಯ ಸರಬರಾಜು ಮಾಡುವ ವ್ಯಕ್ತಿ ಏಕಕಾಲಕ್ಕೆ 24 ಬಾಟಲಿಗಿಂತ ಹೆಚ್ಚಿನ ಮದ್ಯವನ್ನು ಕೊಂಡೊಯ್ಯುವಂತಿಲ್ಲ. ಎಂಆರ್ಪಿಗಿಂತ ಅಧಿಕ ದರವನ್ನು ವಿಧಿಸುವಂತಿಲ್ಲ. ಮದ್ಯ ಸರಬರಾಜು ಮಾಡಲು ಅರ್ಧಕ್ಕಿಂತ ಹೆಚ್ಚು ಜನರನ್ನು ನಿಯೋಜಿಸುವಂತೆ ಇಲ್ಲ ಎಂಬ ಷರತ್ತುಗಳೊಂದಿಗೆ ಮನೆ ಬಾಗಿಲಿಗೆ ಮದ್ಯ ಪೂರೈಕೆಗೆ ಅವಕಾಶ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...