alex Certify ನೋಡನೋಡುತ್ತಲೇ ಮಿಂಚು ಬಡಿದು ಸುಟ್ಟು ಕರಕಲಾದ ಯುವಕ..! ಬೆಚ್ಚಿ ಬೀಳಿಸುತ್ತೆ ಸಿಸಿ ಟಿವಿ ದೃಶ್ಯಾವಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡನೋಡುತ್ತಲೇ ಮಿಂಚು ಬಡಿದು ಸುಟ್ಟು ಕರಕಲಾದ ಯುವಕ..! ಬೆಚ್ಚಿ ಬೀಳಿಸುತ್ತೆ ಸಿಸಿ ಟಿವಿ ದೃಶ್ಯಾವಳಿ

ಮಳೆಯಿಂದ ರಕ್ಷಣೆ ಪಡೆಯಬೇಕೆಂದು ಮರದ ಕೆಳಗೆ ನಿಂತಿದ್ದರೆ ಅದೇ ಮರಕ್ಕೆ ಮಿಂಚು ಬಡಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಮೂವರು ಗಾಯಗೊಂಡ ದಾರುಣ ಘಟನೆ ಗುರಗಾಂವ್​​ನಲ್ಲಿ ನಡೆದಿದೆ. ಈ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗುರುಗಾಂವ್​​ನ ಸೆಕ್ಟರ್​​ 82ರ ವಿಲಾಸ್​ ಅಪಾರ್ಟ್​ಮೆಂಟ್​ ಕಾಂಪ್ಲೆಕ್ಸ್​​ನಲ್ಲಿ ಈ ಘಟನೆ ಸಂಭವಿಸಿದೆ.

ಸಿಸಿ ಟಿವಿ ದೃಶ್ಯಾವಳಿಯಲ್ಲಿ ವ್ಯಕ್ತಿಯೊಬ್ಬ ಮಳೆಯಿಂದ ಬಚಾವಾಗೋಕೆ ಮರದ ಕೆಳಗೆ ಆಶ್ರಯ ಪಡೆದಿರೋದನ್ನ ಕಾಣಬಹುದಾಗಿದೆ. ಕೂಡಲೇ ಮರಕ್ಕೆ ಮಿಂಚು ಬಡಿದಿದ್ದು, ಕೆಲವೇ ಕ್ಷಣಗಳಲ್ಲಿ ಮೂವರು ಕುಸಿದು ಬಿದ್ದಿದ್ದಾರೆ. ಮರದ ಎದುರು ನಿಂತಿದ್ದ ವ್ಯಕ್ತಿ ಕೂಡ ಸ್ವಲ್ಪ ಸಮಯ ಬಿಟ್ಟು ಕುಸಿದು ಬಿದ್ದಿದ್ದಾನೆ. ಓರ್ವ ಗಾಯಾಳುವನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ರೆ ಇನ್ನೊಬ್ಬನನ್ನ ಐಸಿಯುವಿನಲ್ಲಿ ಇಡಲಾಗಿದೆ. ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

— Newsroom Post (@NewsroomPostCom) March 13, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...