alex Certify ವಿಮಾನ ನಿಲ್ದಾಣದಲ್ಲಿ ಚಿರತೆ ಪ್ರತ್ಯಕ್ಷ…! ಬೆಚ್ಚಿಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ನಿಲ್ದಾಣದಲ್ಲಿ ಚಿರತೆ ಪ್ರತ್ಯಕ್ಷ…! ಬೆಚ್ಚಿಬಿದ್ದ ಜನ

ಡೆಹ್ರಾಡೂನ್​​ನಲ್ಲಿರುವ ಜಾಲಿಗ್ರಾಂಟ್​ ವಿಮಾನ ನಿಲ್ದಾಣದ ಆವರಣಕ್ಕೆ ಚಿರತೆಯೊಂದು ಪ್ರವೇಶಿಸಿದ್ದು ವಿಮಾನ ನಿಲ್ದಾಣದ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು.

ವಿಮಾನ ನಿಲ್ದಾಣಕ್ಕೆ ಬಂದು ಗಲಿಬಿಲಿಗೆ ಒಳಗಾದ ಚಿರತೆ ಟರ್ಮಿನಲ್​ ಕಟ್ಟಡದ ಬಳಿ ಇರುವ ಪೈಪ್​​ ಒಂದರಲ್ಲಿ ಅಡಗಿ ಕುಳಿತಿತ್ತು ಅಂತಾ ಜಾಲಿಗ್ರಾಂಟ್​ ವಿಮಾನ ನಿಲ್ದಾಣದ ನಿರ್ದೇಶಕ ಜಿ.ಕೆ. ಗೌತಮ್​ ಹೇಳಿದ್ದಾರೆ.

ಚಿರತೆ ಸಿಕ್ಕಾಪಟ್ಟೆ ದೂರದಲ್ಲಿ ಇದ್ದಿದ್ದರಿಂದ ಅದನ್ನ ಗುರುತಿಸೋದು ಕಷ್ಟವಾದರೂ ಸಹ ವಿಮಾನ ನಿಲ್ದಾಣದ ಸಿಬ್ಬಂದಿ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಚಿರತೆ ತಾನಿದ್ದ ಸ್ಥಳದಿಂದ ಏರ್​ಪೋರ್ಟ್​ ಒಳಕ್ಕೆ ನುಗ್ಗದಂತೆ ನೋಡುವ ಸಲುವಾಗಿ ಎರಡೂ ಬದಿಯನ್ನ ಬಂದ್​ ಮಾಡಲಾಗಿತ್ತು. ಬಳಿಕ ಪೈಪ್​​ನ್ನ ಕೊರೆದು ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನ ರಕ್ಷಿಸಿದ್ದಾರೆ.

ಜಾಲಿಗ್ರಂಟ್​ ವಿಮಾನ ನಿಲ್ದಾಣ ಅರಣ್ಯ ಪ್ರದೇಶಕ್ಕೆ ಸಮೀಪದಲ್ಲಿರೋದ್ರಿಂದ ಅನೇಕ ಬಾರಿ ಈ ನಿಲ್ದಾಣಕ್ಕೆ ಚಿರತೆ, ತೋಳ ಹಾಗೂ ನರಿಗಳು ಎಂಟ್ರಿ ಕೊಟ್ಟಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...