alex Certify ಸೋಂಕಿತರ ಜೀವ ಉಳಿಸಲು ವೆಂಟಿಲೇಟರ್ ಖರೀದಿಗೂ ಮುಂದಾದ ಕುಟುಂಬಸ್ಥರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಂಕಿತರ ಜೀವ ಉಳಿಸಲು ವೆಂಟಿಲೇಟರ್ ಖರೀದಿಗೂ ಮುಂದಾದ ಕುಟುಂಬಸ್ಥರು

ದೇಶದಲ್ಲಿ ಡೆಡ್ಲಿ ವೈರಸ್​​ ತನ್ನ ಅಟ್ಟಹಾಸ ಮುಂದುವರಿಸಿದೆ. ಈಗಾಗಲೇ ವೈದ್ಯಕೀಯ ಸೌಲಭ್ಯಗಳ ಅಭಾವದಿಂದಾಗಿ ಆರೋಗ್ಯ ಸಿಬ್ಬಂದಿ ಸೋಂಕಿತರನ್ನ ಕಾಪಾಡುವಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಇಲ್ಲಿಯವರೆಗೆ ತಮ್ಮ ಸ್ವಂತ ಖರ್ಚಿನಲ್ಲಿ ರೆಮಿಡಿಸಿವರ್​, ಆಕ್ಸಿಜನ್​ ಸಿಲಿಂಡರ್​ಗಳ ವ್ಯವಸ್ಥೆ ಮಾಡುತ್ತಿದ್ದ ಸೋಂಕಿತರ ಕುಟುಂಬಸ್ಥರು ಇದೀಗ ವೆಂಟಿಲೇಟರ್​ ಖರೀದಿಗೂ ಮುಂದಾಗಿದ್ದಾರೆ.

ಇಂತಹ ವೈದ್ಯಕೀಯ ಉಪಕರಣಗಳನ್ನ ಖರೀದಿ ಮಾಡೋದು ಜನ ಸಾಮಾನ್ಯರ ಬಳಿ ಆಗುವಂತಹ ಕೆಲಸವಲ್ಲ. ಆದರೂ ಸಹ ಕುಟುಂಬಸ್ಥರನ್ನ ಉಳಿಸಿಕೊಳ್ಳಬೇಕು ಎಂಬ ಆಸೆಯಲ್ಲಿ ಜನರು ವೆಂಟಿಲೇಟರ್​ಗಳನ್ನೂ ಖರೀದಿ ಮಾಡ್ತಿದ್ದಾರೆ.

ಪತಂಜಲಿ ಸ್ಟೋರ್ ನಲ್ಲಿ ಔಟ್ ಆಫ್ ಸ್ಟಾಕ್ ಆಗಿದೆ ಈ ಮಾತ್ರೆ

ಅಹಮದಾಬಾದ್​ ನಿವಾಸಿಯಾಗಿರುವ ಮನೀಷ್​ ಪಟೇಲ್​ ಎಂಬವರು ತಮ್ಮ ಪತ್ನಿಯ ಸಹೋದರ ಪವನ್​ ಎಂಬವರನ್ನ ಸೋಂಕಿನಿಂದ ಕಾಪಾಡಬೇಕು ಅಂತಾ ವೆಂಟಿಲೇಟರ್​ನ್ನು ಖರೀದಿ ಮಾಡಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಮನೀಷ್​, 26 ವರ್ಷದ ಪವನ್​ ಜೀವನ ಕಾಪಾಡಲು ನಾನು ಕೈಮೀರಿ ಪ್ರಯತ್ನಿಸುತ್ತಿದ್ದೇನೆ. ಕೆಲ ದಿನಗಳ ಹಿಂದಷ್ಟೇ ಸ್ವಂತ ಖರ್ಚಿನಲ್ಲಿ BiPAP ಮಷಿನ್​ ಖರೀದಿಸಿದ್ದೆವು. ಇದೀಗ ವೆಂಟಿಲೇಟರ್​ ಖರೀದಿಗೂ ಮುಂದಾಗಿದ್ದೇವೆ ಎಂದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...