alex Certify ತೃತೀಯ ಲಿಂಗಿಗಳ ಕಲ್ಯಾಣಕ್ಕಾಗಿ ತನ್ನೆಲ್ಲಾ ಆಭರಣಗಳನ್ನ ಮಾರಿದ ಸಮಾಜ ಸುಧಾರಕಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೃತೀಯ ಲಿಂಗಿಗಳ ಕಲ್ಯಾಣಕ್ಕಾಗಿ ತನ್ನೆಲ್ಲಾ ಆಭರಣಗಳನ್ನ ಮಾರಿದ ಸಮಾಜ ಸುಧಾರಕಿ..!

ಐದು ವರ್ಷಗಳ ಕಾಲ ಉತ್ತರ ಪ್ರದೇಶದ ತೃತೀಯ ಲಿಂಗಿ ಸಮುದಾಯದವರು ಎದುರಿಸುತ್ತಿರುವ ಸಂಕಷ್ಟ ಹಾಗೂ ಸವಾಲುಗಳನ್ನ ಅಧ್ಯಯನ ನಡೆಸಿದ ರಂಜನಾ ಅರ್ಗವಾಲ್​ ತಮ್ಮ ಎಲ್ಲಾ ಆಭರಣಗಳನ್ನ ಮಾರಿ ಈ ಸಮುದಾಯಕ್ಕಾಗಿ ಭೂಮಿಯನ್ನ ಖರೀದಿಸಿದ್ದಾರೆ. ಈ ಭೂಮಿಯಲ್ಲಿ ತೃತೀಯ ಲಿಂಗಿಗಳಿಗೆ ಆಶ್ರಯ ನೀಡುವ ಉದ್ದೇಶವನ್ನ ರಂಜನಾ ಹೊಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಈ ರೀತಿ ತೃತೀಯ ಲಿಂಗಿಗಳಿಗಾಗಿ ಮನೆ ನಿರ್ಮಾಣ ಮಾಡಿಕೊಡ್ತಿರುವ ಮೊದಲ ಮಹಿಳೆ ರಂಜನಾ ಅರ್ಗವಾಲ್​ ಆಗಿದ್ದಾರೆ. ತೃತೀಯ ಲಿಂಗಿಗಳಿಗೆ ಉದ್ಯೋಗ ಪಡೆದು ಸಮಾಜದಿಂದ ಕನಿಷ್ಟ ಬೆಂಬಲವನ್ನೂ ಪಡೆಯೋದು ಎಷ್ಟು ಕಷ್ಟದ ವಿಚಾರ ಎಂಬುದನ್ನ ಅರಿತ ರಂಜನಾ ತಮ್ಮೆಲ್ಲಾ ಆಭರಣಗಳನ್ನ ಮಾರಾಟ ಮಾಡಿ ಬಂದ 2 ಲಕ್ಷ ರೂಪಾಯಿ ಹಣದಲ್ಲಿ ಜಾಗ ಖರೀದಿ ಮಾಡಿದ್ದಾರೆ.

ಆಶ್ರಯ ಮನೆ ನಿರ್ಮಾಣಕ್ಕೆ ಅಡಿಪಾಯ ತೋಡಲಾಗಿದ್ದು, ಸುಮಾರು 20 ಜನರಿಗೆ ವಾಸಿಸಲು ಈ ಮನೆ ಯೋಗ್ಯವಾಗಿರಲಿದೆ. ಅರ್ಗವಾಲ್​ ತನ್ನ ಪತಿ ಇಬ್ಬರು ಗಂಡು ಮಕ್ಕಳು ಹಾಗೂ ಸೊಸೆಯಂದಿರ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಆದರೆ ತೃತೀಯ ಲಿಂಗಿಗಳಿಗೆ ಬಾಡಿಗೆ ಮನೆ ಸಿಗೋದು ಕಷ್ಟ ಎಂಬ ಕಾರಣಕ್ಕೆ ಈ ಸಮುದಾಯಕ್ಕೆ ಶಾಶ್ವತ ಆಸರೆ ನೀಡಲು ಅರ್ಗವಾಲ್​ ಮುಂದಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...