alex Certify ನಕ್ಕು ಆಡಿಕೊಂಡವರೇ ಈಗ ಮೆಚ್ಚಿಕೊಳ್ಳುವಂತೆ ಮಾಡಿದ್ದಾನೆ ವಿಪಿನ್ ಸಾಹು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕ್ಕು ಆಡಿಕೊಂಡವರೇ ಈಗ ಮೆಚ್ಚಿಕೊಳ್ಳುವಂತೆ ಮಾಡಿದ್ದಾನೆ ವಿಪಿನ್ ಸಾಹು

ಒಂದು ಕಾಲದಲ್ಲಿ ಪ್ಯಾರಾಗ್ಲೈಡಿಂಗ್ ಎಂದರೆ ಹೆದರಿ ಓಡುತ್ತಿದ್ದ ವಿಪಿನ್ ಸಾಹು ಈಗ ಎಷ್ಟು ದೂರ ಬೇಕಿದ್ದರೂ ಪ್ಯಾರಾಗ್ಲೈಡಿಂಗ್ ಮಾಡಬಲ್ಲ. ಅಷ್ಟರ ಮಟ್ಟಿಗೆ ಧೈರ್ಯ ಬಂದಿದೆ.

2019 ರಲ್ಲಿ ಪ್ಯಾರಾಗ್ಲೈಡಿಂಗ್ ನಡೆಸಿದಾಗ ಕೆಳಗಿಳಿಸಿ,‌ ಕೆಳಗಿಳಿಸಿ ಎಂದು ಅತ್ತು ಕರೆದು ಗೋಳಾಡಿದ ವಿಪಿನ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿದವರೆಲ್ಲರೂ ನಕ್ಕು ಆಡಿಕೊಂಡಿದ್ದರು.

ಇದಾದ ನಂತರ ರೋಡೀಸ್ ರೆವಲ್ಯೂಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾರೀ ಧೈರ್ಯ ಪಡೆದಿರುವ ಸಾಹು, ಪ್ಯಾರಾಗ್ಲೈಡಿಂಗ್ ಮಾಡಿಸುವವರನ್ನೇ ಎಷ್ಟು ದೂರ ಕರೆದೊಯ್ಯಬಲ್ಲೆ ? 500-1000 ರೂ. ಅಲ್ಲ ಆಸ್ತಿಯನ್ನೇ ಬರೆದರಾಯಿತು ಎನ್ನಲಾರಂಭಿಸಿದ್ದಾನೆ.

ಭಯಮುಕ್ತಗೊಂಡು ಪ್ಯಾರಾಗ್ಲೈಡಿಂಗ್ 2.0 ಎಂಬ ಶೀರ್ಷಿಕೆಯಡಿ ವಿಡಿಯೋ ಹರಿಬಿಟ್ಟಿರುವ ವಿಪಿನ್, ತನ್ನ ಧೈರ್ಯ ಪ್ರದರ್ಶಿಸಿದ್ದಾನೆ. ಭಯವೇ ನನ್ನ ಶಕ್ತಿ. ಎಷ್ಟು ದಿನ ಹೆದರಿ ಕೂರುವುದು ? ಹೀಗಾಗಿ ಭಯವನ್ನೇ ನನ್ನ ಶಕ್ತಿಯಾಗಿಸಿಕೊಂಡೆ, ಗೆದ್ದೆ ಎನ್ನುತ್ತಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...