alex Certify ಚಾಲಕನ ಪ್ರಾಮಾಣಿಕತೆಗೆ ಮೆಚ್ಚುಗೆಯ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲಕನ ಪ್ರಾಮಾಣಿಕತೆಗೆ ಮೆಚ್ಚುಗೆಯ ಮಹಾಪೂರ

ಪ್ರಾಮಾಣಿಕತೆಯೇ ಶ್ರೇಷ್ಠವಾದ ನೀತಿ ಎಂದು ಬಹಳಷ್ಟು ಬಾರಿ ಕೇಳಿಕೊಂಡೇ ನಾವೆಲ್ಲಾ ದೊಡ್ಡವರಾಗಿದ್ದೇವೆ. ಆದರೆ ಈ ಪ್ರಾಮಾಣಿಕತೆ ಎನ್ನುವುದು ಕೇಳಿದಷ್ಟು ಕಾಮನ್ ಆಗಿ ನೋಡಲು ಸಿಗವುದಿಲ್ಲ. ಅದಕ್ಕೇ ನೋಡಿ…! ಪ್ರಾಮಾಣಿಕತೆ ಮೆರೆಯುವ ನಿದರ್ಶನಗಳು ಆಗಾಗ ಘಟಿಸಿದರೆ ಆ ಸುದ್ದಿ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗುವುದು.

ಅಭಿಜಿತ್‌ ಮಜುಂದಾರ್‌ ಹೆಸರಿನ ಪತ್ರಕರ್ತರೊಬ್ಬರು ಇತ್ತೀಚೆಗೆ ಕೋಲ್ಕತ್ತಾದಲ್ಲಿ ತಮಗೆ ಆದ ಅನುಭವವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಊಬರ್‌ ಚಾಲಕ ಸರವನ್ ಕುಮಾರ್‌‌ ಎಂಬಾತ ಮೆರೆದ ಪ್ರಾಮಾಣಿಕತೆ ಅಭಿಜಿತ್‌ಗೆ ಈ ಟ್ವೀಟ್ ಮಾಡಲು ಪ್ರೇರಣೆಯಾಗಿದೆ.

ಗ್ರಾಹಕರನ್ನ ಸೆಳೆಯಲು ಈ ಸೂಪರ್​ ಮಾರ್ಕೆಟ್​ ಮಾಡಿದೆ ಭರ್ಜರಿ ಐಡಿಯಾ….!

ನೇತಾಜಿ ಸುಭಾಷ್ ಚಂದ್ರಬೋಸ್ ವಿಮಾನ ನಿಲ್ದಾಣದಿಂದ ತಮ್ಮ ಮನೆಗೆ ತೆರಳುತ್ತಿದ್ದ ಅಭಿಜಿತ್‌, ಊಬರ್‌ ಕ್ಯಾಬ್‌ ಮಾಡಿಕೊಂಡು ಹೊರಟಿದ್ದಾರೆ. ಮನೆ ಬರುತ್ತಲೇ ಲ್ಯಾಪ್‌ಟಾಪ್, ನಗದು ಹಾಗೂ ಕೆಲವೊಂದು ಕೀಲಿಗಳು ಇದ್ದ ತಮ್ಮ ಬ್ಯಾಗನ್ನು ಅಲ್ಲೇ ಮರೆತು ಬಂದಿದ್ದಾರೆ. ಈ ವಿಷಯ ಅರಿವಿಗೆ ಬರುತ್ತಲೇ ಕ್ಯಾಬ್ ಸರ್ವೀಸ್‌ಗೆ ಕರೆ ಮಾಡಿದ ಮಜುಂದಾರ್‌ ತಾವು ಬಂದ ಕ್ಯಾಬ್ ಚಾಲಕನ ವಿವರಗಳನ್ನು ಕೊಡುವಂತೆ ಕೋರಿದ್ದಾರೆ.

ಕೂಡಲೇ ಚಾಲಕ ಹಾಗೂ ಗ್ರಾಹಕರನ್ನು ಸಂಪರ್ಕಕ್ಕೆ ತಂದ ಊಬರ್‌, ಇಬ್ಬರ ನಡುವೆ ಮಾತುಕತೆ ನಡೆಸಿದೆ. ಅಷ್ಟರಲ್ಲಾಗಲೇ ಅರ್ಧರಾತ್ರಿ ಕಳೆದಿದ್ದರೂ ಸಹ ಸರವನ್ ಕುಮಾರ್‌ ಸಾಲ್ಟ್‌ ಲೇಕ್‌ನಲ್ಲಿರುವ ಅಭಿಜಿತ್‌ ನಿವಾಸಕ್ಕೆ ಆಗಮಿಸಿ ಅವರ ವಸ್ತುವನ್ನು ಹಿಂದಿರುಗಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...