alex Certify ರಸ್ತೆ ಮೇಲೆ ಯುವಕನ ಪ್ರೇಮ ಪತ್ರ..! ಇದರ ಉದ್ದ ಬರೋಬ್ಬರಿ 2.5 ಕಿ.ಮೀ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಮೇಲೆ ಯುವಕನ ಪ್ರೇಮ ಪತ್ರ..! ಇದರ ಉದ್ದ ಬರೋಬ್ಬರಿ 2.5 ಕಿ.ಮೀ.

ಪ್ರೇಮ ನಿವೇದನೆ ಮಾಡೋಕೆ ಕೆಲವರು ಇನ್ನಿಲ್ಲದ ಸರ್ಕಸ್​ ಮಾಡ್ತಾರೆ. ಅದೇ ರೀತಿ ಮಹಾರಾಷ್ಟ್ರದ ಕೊಲ್ಹಾಪುರದ ನಿವಾಸಿಯೊಬ್ಬ ತನ್ನ ಗರ್ಲ್​ಫ್ರೆಂಡ್​ಗಾಗಿ 2.5 ಕಿಲೋಮೀಟರ್​ ದೂರದ ರಸ್ತೆಯುದ್ದಕ್ಕೂ ಐ ಲವ್​ ಯೂ & ಐ ಮಿಸ್​ ಯೂ ಎಂದು ಪೇಂಟಿಂಗ್​ ಮಾಡುತ್ತಲೇ ಹೋಗಿದ್ದಾನೆ,

ಒಂದು ಕಡೆಯಂತೂ ಈತ ಐ ಮಿಸ್​ ಯೂ ಝಿಂದಗಿ ಕೆ ಸಾಥ್​ ಭಿ, ಝಿಂದಗಿ ಕೆ ಬಾದ್​ ಭಿ ( ಜೀವನದ ಜೊತೆಯೂ ಜೀವನದ ನಂತರವೂ ) ಎಂಬ ಎಲ್ಐಸಿ ಟ್ಯಾಗ್​ಲೈನ್​ನ್ನು ಪೇಂಟ್​ ಮಾಡಿದ್ದಾನೆ.

ಕೊಲ್ಹಾಪುರ ಜಿಲ್ಲೆಯ ಧಾರಗುಟ್ಟಿ ಗ್ರಾಮದ ರಸ್ತೆಯ ಮೇಲೆ ಬರೆಯಲಾದ ಈ ಪೇಟಿಂಗ್​ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ರಾತ್ರಿ ಬೆಳಗಾಗೋದ್ರಲ್ಲಿ ರಸ್ತೆಯ ಮೇಲೆ ಮೂಡಿದ ಈ ಚಿತ್ರಣ ಕಂಡು ಗ್ರಾಮಸ್ಥರು ಶಾಕ್​ ಆಗಿದ್ದಾರೆ.

2.5 ಕಿಲೋಮೀಟರ್ ರಸ್ತೆಯಲ್ಲಿ ಯಾರು ಈ ಕೃತ್ಯವನ್ನ ಎಸಗಿದ್ದಾರೆ ಅನ್ನೋದು ಇಲ್ಲಿಯವರೆಗೆ ಪತ್ತೆಯಾಗಿಲ್ಲ. ಪೊಲೀಸರು ಇದು ಸ್ಥಳೀಯ ಯುವಕರ ಕೃತ್ಯ ಇರಬಹುದೆಂದು ಶಂಕಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...