alex Certify ಬಿಜೆಪಿ ಸಂಸದೆ ಕಿರಣ್​ ಖೇರ್​ಗೆ ಬ್ಲಡ್​ ಕ್ಯಾನ್ಸರ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಸಂಸದೆ ಕಿರಣ್​ ಖೇರ್​ಗೆ ಬ್ಲಡ್​ ಕ್ಯಾನ್ಸರ್….!

ಬಾಲಿವುಡ್​ ಹಿರಿಯ ನಟಿ ಹಾಗೂ ಬಿಜೆಪಿ ಸಂಸದೆ ಕಿರಣ್​ ಖೇರ್​ ಬ್ಲಡ್ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಕಿರಣ್​ ಪತಿ ಹಿರಿಯ ನಟ ಅನುಪಮ್​ ಖೇರ್​ ಮಾಹಿತಿ ನೀಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಈ ವಿಚಾರವನ್ನ ಶೇರ್​ ಮಾಡಿರುವ ನಟ ಅನುಪಮ್​ ಖೇರ್​, ತಮ್ಮ ಪತ್ನಿ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗುವ ದಾರಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ವದಂತಿಗಳು ಪರಿಸ್ಥಿತಿಯನ್ನ ಸುಧಾರಿಸೋದಿಲ್ಲ. ನಾನು ಹಾಗೂ ನನ್ನ ಪುತ್ರ ಸಿಕಂದರ್​ ಹೇಳೋದೇನೆಂದರೆ ನನ್ನ ಪತ್ನಿ ಮಲ್ಟಿಪಲ್​ ಮೈಲೋಮಾದಿಂದ ಬಳಲುತ್ತಿದ್ದಾರೆ. ಇದೊಂದು ಬಗೆಯ ಬ್ಲಡ್​ ಕ್ಯಾನ್ಸರ್​ ಆಗಿದೆ. ಆಕೆ ಈಗಾಗಲೇ ಚಿಕಿತ್ಸೆಯನ್ನ ಪಡೆಯುತ್ತಿದ್ದಾಳೆ. ಆಕೆ ಮೊದಲಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗುತ್ತಾಳೆ ಎಂಬ ನಂಬಿಕೆ ಇದೆ ಎಂದು ಬರೆದಿದ್ದಾರೆ.

ಇದೇ ವೇಳೆ ಪತ್ನಿ ಕಿರಣ್​ ಖೇರ್​ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಗುಂಪನ್ನ ಅನುಪಮ್​ ಖೇರ್​ ಅಸಾಧಾರಣ ವ್ಯಕ್ತಿತ್ವ ಎಂದು ಹಾಡಿ ಹೊಗಳಿದ್ದಾರೆ. ಅಪೂರ್ವ ವೈದ್ಯರ ಗುಂಪು ಆಕೆಯನ್ನ ನೋಡಿಕೊಳ್ಳುತ್ತಿದೆ. ಇಂತಹ ವೈದ್ಯರನ್ನ ಪಡೆದ ನಾವೇ ಧನ್ಯರು. ಆಕೆ ಹೋರಾಟಗಾರ್ತಿ ಎಂದು ಹೇಳಿದ್ದಾರೆ.

ಇದೇ ವೇಳೆ ಕಿರಣ್​ ಖೇರ್​​ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸುತ್ತಿರುವ ಹಿತೈಷಿಗಳಿಗೂ ಅನುಪಮ್​ ಖೇರ್​ ಧನ್ಯವಾದ ಅರ್ಪಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...