ಕೇರಳದ ತಿರುವನಂತಪುರಂನ ಕುಗ್ರಾಮದಿಂದ ಬಂದ 23 ವರ್ಷದ ಯುವತಿ ಜೆನಿ ಜೆರೋಮ್ ಏರ್ ಅರೇಬಿಯಾದ ಜಿ 9 449 ವಿಮಾನದಲ್ಲಿ ಸಹ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಶಾರ್ಜಾದಿಂದ ತಿರುವನಂತಪುರಂ ಮಾರ್ಗದಲ್ಲಿ ಸಹ ಪೈಲೆಟ್ ಆಗಿ ಕಾರ್ಯನಿರ್ವಹಿಸುವ ಮೂಲಕ ಕೇರಳದ ಮೊದಲ ಮಹಿಳಾ ವಾಣಿಜ್ಯ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರಸ್ತುತ ತನ್ನ ಪೋಷಕರೊಂದಿಗೆ ಅಜ್ಮಾನ್ನಲ್ಲಿ ವಾಸವಿರುವ ಜೆನಿ ಬಾಲ್ಯದಿಂದಲೇ ಪೈಲಟ್ ಆಗುವ ಕನಸನ್ನ ಹೊಂದಿದ್ದರು. ಇದೀಗ ತಮ್ಮ ತವರು ರಾಜ್ಯದಲ್ಲಿ ಕೋ ಪೈಲಟ್ ಆಗಿ ಕಾರ್ಯನಿರ್ವಹಿಸುವ ಮೂಲಕ ಕನಸನ್ನ ನನಸು ಮಾಡಿಕೊಂಡಿದ್ದಾರೆ. ಜೆನಿಯ ಈ ಸಾಧನೆಗೆ ತಿರುವನಂತಪುರಂ ಸಂಸದ ಶಶಿ ತರೂರ್ ಸೇರಿದಂತೆ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ.
ನಿವೃತ್ತಿ ನಂತ್ರ ಪ್ರತಿ ತಿಂಗಳು ಸಿಗಲಿದೆ ನಿಯಮಿತ ಹಣ
ವಾಣಿಜ್ಯ ವಿಮಾನದಲ್ಲಿ ಮೊದಲ ಬಾರಿಗೆ ಸಹ ಪೈಲಟ್ ಆಗಿ ಸೇವೆ ಸಲ್ಲಿಸಿದ ತಿರುವನಂತಪುರಂನ ಕೊಚಿತೊರಾ ಗ್ರಾಮದ ಜೆನಿ ಜೆರೋಮ್ಗೆ ನನ್ನ ಅಭಿನಂದನೆಗಳು. ಮೀನುಗಾರಿಕೆಯನ್ನ ನೆಚ್ಚಿಕೊಂಡು ಬಂದ ಪುಟ್ಟ ಗ್ರಾಮಕ್ಕೆ ಸೇರಿದ ಈ ಹೆಣ್ಣುಮಗಳು ಇದೀಗ ಶಾರ್ಜಾದಿಂದ ತಿರುವನಂತಪುರಂವರೆಗೆ ಏರ್ ಅರೇಬಿಯಾ ವಿಮಾನದಲ್ಲಿ ಸಹ ಪೈಲಟ್ ಆಗಿ ಕಾರ್ಯ ನಿರ್ವಹಿಸುವ ಮೂಲಕ ತಮ್ಮ ಬಾಲ್ಯದ ಕನಸನ್ನ ನನಸು ಮಾಡಿಕೊಂಡಿದ್ದಾರೆ. ಈಕೆ ನಿಜಕ್ಕೂ ಒಂದು ಸ್ಪೂರ್ತಿ ಎಂದು ಶಶಿ ತರೂರ್ ಟ್ವೀಟಾಯಿಸಿದ್ದಾರೆ.
ಮನಕಲಕುತ್ತೆ ಬಡ ಹುಡುಗನ ಕಣ್ಣೀರ ಕಥೆ
ಇನ್ನು ಈ ವಿಚಾರವಾಗಿ ಮಾತನಾಡಿರುವ ಜೆನಿ ಸೋದರ ಸಂಬಂಧಿ ಶೆರಿನ್, ಜೆನಿಗೆ ಹಾರಾಟದ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಪೈಲಟ್ ಆಗೋದು ಆಕೆಯ ಬಾಲ್ಯದ ಕನಸು. ಕೇವಲ ಜೆನಿ ಮಾತ್ರವಲ್ಲದೇ ಆಕೆಯ ತಂದೆ ಜೆರೋಮ್ ಸಹ ಮಗಳನ್ನ ಪೈಲಟ್ ಮಾಡಬೇಕೆಂಬ ಕನಸನ್ನ ಹೊಂದಿದ್ದರು ಎಂದು ಹೇಳಿದ್ದಾರೆ.