alex Certify ಬಿದ್ದುಬಿದ್ದು ನಗುವಂತೆ ಮಾಡುವಂತೆ ಕೇರಳ ಪೊಲೀಸರ ಈ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿದ್ದುಬಿದ್ದು ನಗುವಂತೆ ಮಾಡುವಂತೆ ಕೇರಳ ಪೊಲೀಸರ ಈ ವಿಡಿಯೋ…!

ಪೊಲೀಸ್​ ಇಲಾಖೆ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದೆ. ವಿವಿಧ ರಾಜ್ಯಗಳ ಪೊಲೀಸ್​ ಇಲಾಖೆ ಅಧಿಕೃತ ಟ್ವಿಟರ್​ ಖಾತೆಗಳಲ್ಲಿ ಜನ ಜಾಗೃತಿ ಮೂಡಿಸುವ ಸಲುವಾಗಿ ಫನ್ನಿ ವಿಡಿಯೋಗಳನ್ನ ಶೇರ್​ ಮಾಡಲಾಗುತ್ತೆ. ಬಹುತೇಕ ಎಲ್ಲಾ ಪೋಸ್ಟ್​​ಗಳು ವೈರಲ್​ ಆಗುತ್ತೆ.‌

ಈ ಸಾಲಿಗೆ ಸೇರಿದ ಮತ್ತೊಂದು ವಿಡಿಯೋ ಕೇರಳ ಪೊಲೀಸರು ಪೋಸ್ಟ್​ ಮಾಡಿರುವ ತ್ರಿಬಲ್​ ರೈಡಿಂಗ್​. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮೂವರು ಪೊಲೀಸರು ಕಂಡೊಡನೆಯೇ ಕಕ್ಕಾಬಿಕ್ಕಿಯಾಗಿ ಓಡುವ ಸಿಸಿ ಟಿವಿ ದೃಶ್ಯಾವಳಿ ಇದಾಗಿದೆ.

ಫೇಸ್​ಬುಕ್​ನಲ್ಲಿ ಶೇರ್​ ಮಾಡಲಾದ ಈ ವಿಡಿಯೋದಲ್ಲಿ ಮೂವರು ಸ್ಕೂಟಿಯ ಮೇಲೆ ಸಂಚರಿಸುತ್ತಿರ್ತಾರೆ.

ಮೂವರಲ್ಲಿ ಒಬ್ಬರೂ ಹೆಲ್ಮೆಟ್​  ಧರಿಸಿಲ್ಲ. ಪೊಲೀಸರ ಜೀಪ್​ ಕಂಡೊಡನೆಯೇ ಸ್ಕೂಟಿಯನ್ನ ನಿಲ್ಲಿಸ್ತಾರೆ. ಇದರಲ್ಲಿ ಒಬ್ಬ ಸ್ಕೂಟಿಯಿಂದ ಇಳಿದು ಓಡಿ ಹೋಗ್ತಾನೆ. ಸ್ಕೂಟಿ ಬಿಡುತ್ತಿರುವವನೂ ಸಹ ಸ್ಕೂಟಿ ಸಮೇತ ಪರಾರಿಯಾಗುತ್ತಾನೆ. ಆದರೆ ಇನ್ನೊಬ್ಬ ವ್ಯಕ್ತಿ ಮಾತ್ರ ಮಾಸ್ಕ್​ನ್ನು ಧರಿಸಿ ಏನೂ ಆಗದವನಂತೆ ರಸ್ತೆಯ ಮೇಲೆ ನಡೆದುಕೊಂಡು ಹೋಗಿದ್ದಾನೆ.

ಪೊಲೀಸ್​ ವ್ಯಾನ್​ ಈ ವ್ಯಕ್ತಿ ಇದ್ದಲ್ಲಿಯೇ ಬಂದು ನಿಂತಿದೆ. ವ್ಯಾನ್​ ಒಳಗಿದ್ದ ಪೊಲೀಸರು ಈತನಿಗೆ ಕೆಲ ಪ್ರಶ್ನೆಗಳನ್ನ ಕೇಳಿದ್ದಾರೆ. ಈ ಭೂಪ ಮಾತ್ರ ಏನೂ ಆಗೇ ಇಲ್ಲ ಎಂಬಂತೆ ಮಾತನಾಡುತ್ತಿದ್ದಾನೆ. ಈ ವಿಡಿಯೋಗೆ, ಗೋಪು, ತಪ್ಪು ಮಾಡದವರು ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...