alex Certify ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಯುವಕ…! ಹೇಗೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಯುವಕ…! ಹೇಗೆ ಗೊತ್ತಾ…?

ಆತ ದೇಗುಲದಲ್ಲಿ ಕೆಲಸ ಮಾಡುವ ಯುವಕ. ಅವನಿಗೆ ಒಂದು ಸಾವಿರ ನೋಡೋದೆ ದೊಡ್ಡ ಕಷ್ಟವಾದಂತಹ ಸಮಯದಲ್ಲಿ ಕೋಟ್ಯಾಧಿಪತಿಯಾದ ಅಂದರೆ ಸುಮ್ಮನೆ ಅಲ್ಲ. ಒಂದು ಲಾಟರಿ ಹೊಡೆಯಬೇಕು ಇಲ್ಲ ದೇವರು ಪ್ರತ್ಯಕ್ಷನಾಗಿ ವರ ಕೊಟ್ಟಿರಬೇಕು ಅಲ್ವಾ.

ಹೌದು, ನಾವೆಲ್ಲಾ ಊಹೆ ಮಾಡಿದಂತೆ ಈತನಿಗೆ ಸಿಕ್ಕಿದ್ದು ಲಾಟರಿ ಹಣವೇ. ಈ ಯುವಕನ ಹೆಸರು ಅನಂತು ವಿಜಯನ್. ಕೇರಳದ ಕೊಚ್ಚಿಯಲ್ಲಿರುವ ದೇವಸ್ಥಾನದಲ್ಲಿ ಈತನ ಕೆಲಸ. ಈತ ಲಾಟರಿ ಟಿಕೆಟ್ ಒಂದನ್ನು ಖರೀದಿಸಿದ್ದಾನೆ. ಯಾರೂ ಊಹೆ ಮಾಡದ ರೀತಿಯಲ್ಲಿ ಆತನಿಗೆ 12 ಕೋಟಿ ರೂ. ಲಾಟರಿ ಹೊಡೆದಿದೆ. ನಿಜಕ್ಕೂ ಒಂದು ಕ್ಷಣ ಆಶ್ಚರ್ಯ ಆಗಿರೋದಂತೂ ಸತ್ಯ. ಈ ಲಾಟರಿಯಿಂದ ಕೋಟಿ ಹಣ ಬಂದದ್ದು ಆತನಿಗೆ ನಂಬುವುದಕ್ಕೇ ಸಾಧ್ಯವಾಗಿಲ್ಲವಂತೆ.

ಇನ್ನು ಲಾಟರಿ ಹೊಡೆಯೋದಿಕ್ಕೂ ಮುನ್ನ ಈತ ತನ್ನ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಿದ್ದನಂತೆ. ನಾನು ಒಂದಲ್ಲ ಒಂದು ದಿನ ಕೋಟ್ಯಾಧಿಪತಿ ಆಗುತ್ತೇನೆ ಎಂದು ಎಲ್ಲರ ಬಳಿ ಮಾತನಾಡುತ್ತಿದ್ದನಂತೆ. ಆತನ ಮಾತಿಗೆ ಯಾರೂ ಕಿವಿ ಕೊಟ್ಟಿರಲಿಲ್ಲ. ಆದರೆ ಇದೀಗ ಕೋಟಿಗಟ್ಟಲೆ ಹಣ ಬಂದಿದ್ದು ನೋಡಿದ ಅವರೆಲ್ಲಾ ಶಾಕ್ ಆಗಿರೋದಂತು ಸತ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...