alex Certify ಲಾಕ್ ಡೌನ್ ವೇಳೆಯಲ್ಲಿ ಆಶ್ರಯ ನೀಡಿದ ಸ್ನೇಹಿತನ ಪತ್ನಿಯೊಂದಿಗೆ ಸಂಬಂಧ ಬೆಳೆಸಿ ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ವೇಳೆಯಲ್ಲಿ ಆಶ್ರಯ ನೀಡಿದ ಸ್ನೇಹಿತನ ಪತ್ನಿಯೊಂದಿಗೆ ಸಂಬಂಧ ಬೆಳೆಸಿ ಪರಾರಿ

ಕೊಚ್ಚಿ: ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಲಾಕ್ ಡೌನ್ ವೇಳೆ ಆಶ್ರಯ ನೀಡಿದ ತನ್ನ ಗೆಳೆಯನ ಪತ್ನಿಯೊಂದಿಗೆ ವ್ಯಕ್ತಿಯೊಬ್ಬ ಪರಾರಿಯಾಗಿದ್ದಾನೆ.

ಲಾಕ್ಡೌನ್ ಸಂದರ್ಭದಲ್ಲಿ ಆಶ್ರಯ ನೀಡಿದ ಗೆಳೆಯನ ಪತ್ನಿಯೊಂದಿಗೆ ಆತ್ಮೀಯತೆ ಬೆಳೆಸಿಕೊಂಡ ವ್ಯಕ್ತಿ ಆಕೆಯನ್ನು ಜೊತೆಗೇ ಕರೆದುಕೊಂಡು ಹೋಗಿದ್ದಾನೆ. 32 ವರ್ಷದ ಲೋಥಾರಿಯೋ ಎರ್ನಾಕುಲಂನಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು 20 ವರ್ಷಗಳ ಬಳಿಕ ಬಾಲ್ಯ ಸ್ನೇಹಿತನ ಸಂಪರ್ಕ ಸಿಕ್ಕಿದೆ.

ಮಾರ್ಚ್ ನಲ್ಲಿ ಲಾಕ್ಡೌನ್ ಜಾರಿಯಾಗಿದ್ದು ಮೇ 1 ರಂದು ಎರ್ನಾಕುಲಂ ಜಿಲ್ಲೆಯನ್ನು ಹಸಿರು ವಲಯವೆಂದು ಘೋಷಿಸಲಾಗಿತ್ತು. ಹೀಗೆ ಘೋಷಣೆಯಾದ ನಂತರವೂ ಸ್ನೇಹಿತ ಮನೆಯಿಂದ ಹೊರಹೋಗಲು ಹಿಂಜರಿದ ಹಿನ್ನೆಲೆಯಲ್ಲಿ ಪತ್ನಿ ಮತ್ತು ಸ್ನೇಹಿತನ ಸಂಬಂಧದ ಬಗ್ಗೆ ಲೋಥಾರಿಯೋ ಅನುಮಾನಗೊಂಡಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಪತ್ನಿಯೊಂದಿಗೆ ಸ್ನೇಹಿತ ಪರಾರಿಯಾಗಿದ್ದು ಪೊಲೀಸರಿಗೆ ದೂರು ನೀಡಲಾಗಿದೆ.

ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದ ಸ್ನೇಹಿತ ಕಾರ್, ಆಭರಣದೊಂದಿಗೆ ಪತ್ನಿ ಮಕ್ಕಳನ್ನು ಕರೆದುಕೊಂಡು ಪರಾರಿಯಾಗಿರುವುದಾಗಿ ಲೋಥಾರಿಯೋ ದೂರು ನೀಡಿದ್ದಾರೆ. ನಂತರದಲ್ಲಿ ಸ್ನೇಹಿತ ಹಾಗೂ ಪತ್ನಿ ಮಕ್ಕಳೊಂದಿಗೆ ಪೊಲೀಸರ ಎದುರು ಹಾಜರಾಗಿದ್ದಾರೆ. ಗಂಡನ ಸ್ನೇಹಿತನೊಂದಿಗೆ ಇರುವುದಾಗಿ ಲೋಥಾರಿಯೋ ಪತ್ನಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ಮುನ್ನಾರ್ ನಲ್ಲಿರುವ ಸಂಬಂಧಿಕರನ್ನು ಭೇಟಿಯಾಗಲು ಬಂದಿದ್ದ ವ್ಯಕ್ತಿ  ಲಾಕ್ ಡೌನ್ ಜಾರಿಯಾಗಿದ್ದರಿಂದ ಸ್ನೇಹಿತರ ಮೂಲಕ ಲೋಥಾರಿಯೋ ನಂಬರ್ ಪಡೆದುಕೊಂಡು ಅವರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾನೆ. 20 ವರ್ಷದ ನಂತರ ಗೆಳೆಯ ಸಿಕ್ಕಿದ್ದರಿಂದ ಲೋಥಾರಿಯೋ ಆಶ್ರಯ ನೀಡಿದ್ದಾರೆ. ಆದರೆ, ಲಾಕ್ ಡೌನ್ ಸಮಯವನ್ನು ಮನೆಯಲ್ಲಿ ಕಳೆದ ಸ್ನೇಹಿತ, ಪತ್ನಿಯೊಂದಿಗೆ ಸಂಬಂಧ ಬೆಳೆಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...