alex Certify ಹಕ್ಕಿಗಾಗಿ ಹಾಡು ಹೇಳಿದ ಕಾಶ್ಮೀರಿ ಸಿಂಗರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಕ್ಕಿಗಾಗಿ ಹಾಡು ಹೇಳಿದ ಕಾಶ್ಮೀರಿ ಸಿಂಗರ್…!

Watch: Kashmiri Man Sings to a Bird Sitting on a Car, Wins Hearts on Internet

ಕಾಶ್ಮೀರ: ಇಂಪಾಗಿ ಹಾಡು ಹೇಳುವವರನ್ನು ‘ಹಾಡು ಹಕ್ಕಿ’ ಎಂದು‌ ಕರೆಯುವುದಿದೆ. ಆದರೆ ಇಲ್ಲೊಬ್ಬರು ಹಕ್ಕಿಗಾಗಿ ಹಾಡು ಹೇಳಿ ಸುದ್ದಿಯಾಗಿದ್ದಾರೆ. @swastikmastaan ಎಂಬ ಇನ್ಸ್ ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಅಪ್‌ಲೋಡ್ ಆಗಿದ್ದು, ಸಖತ್ ಫೇಮಸ್ ಆಗಿದೆ.

ಆ ವಿಡಿಯೋದಲ್ಲಿ ಕಾರಿನ ಮೇಲೆ ಒಂದು ಹಕ್ಕಿ ಕುಳಿತಿದ್ದರೆ ಹಾಡುಗಾರ ಅದರ ಎದುರು ನಿಂತು ಸುಮಧುರ ಸ್ವರದಲ್ಲಿ ಕಾಶ್ಮೀರಿ ಹಾಡು “ಮಾಯಿ ಛಾಯಿ” ಹಾಡುತ್ತಿದ್ದಾರೆ. “ಮಾಯಿ ಛಾಯಿ” ಎಂಬುದು ಕಾಶ್ಮೀರದ ಪ್ರಸಿದ್ಧ ಹಳೆಯ ಹಾಡಾಗಿದೆ.

“ನನ್ನ ಆತ್ಮ ನಿನ್ನ ಪ್ರೀತಿಗೆ ಹಂಬಲಿಸುತ್ತದೆ. ನನ್ನ ಪ್ರೀತಿಯ ಅಮ್ಮ ನಾನು ನನ್ನ ಆತ್ಮವನ್ನು ನಿನಗಾಗಿ ಸಮರ್ಪಿಸುತ್ತೇನೆ. ಮರ್ತ್ಯವು ಬಿಡುವಿಲ್ಲದೇ ಸುತ್ತಾಡುತ್ತದೆ” ಎಂಬ ಭಾವಾರ್ಥವನ್ನು ಹಾಡು ಹೊಂದಿದೆ ಎಂದು ಹಾಡುಗಾರ ವಿವರಿಸಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...