alex Certify ಕಂಗನಾ ರಣಾವತ್ ಈ ಸಿನಿಮಾ ಶೂಟಿಂಗ್​ಗೆ ವ್ಯಯಿಸಿದ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಗನಾ ರಣಾವತ್ ಈ ಸಿನಿಮಾ ಶೂಟಿಂಗ್​ಗೆ ವ್ಯಯಿಸಿದ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ..!

ಬಾಲಿವುಡ್​ ಕ್ವೀನ್​ ಕಂಗನಾ ರಣಾವತ್​ ಕೆಲ ಸಮಯದಿಂದ ಸಿನಿಮಾಗಿಂತ ಜಾಸ್ತಿ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಾಗ್ತಾ ಇರ್ತಾರೆ. ಆದರೆ ಆಕೆ ವಾದ – ವಿವಾದಗಳ ನಡುವೆಯೂ ಸಿನಿಮಾ ಶೂಟಿಂಗ್​​ನಲ್ಲಿಯೂ ನಿರತರಾಗಿದ್ದಾರೆ.

ಇದೀಗ ಕಂಗನಾ ರಣಾವತ್​ ಟ್ವಿಟರ್​ನಲ್ಲಿ ಒಂದು ವಿಡಿಯೋ ಶೇರ್​ ಮಾಡಿದ್ದು ಇದನ್ನ ನೋಡಿದ ನೆಟ್ಟಿಗರು ಶಾಕ್​ ಆಗಿದ್ದಾರೆ. ಕಂಗನಾ ರಣಾವತ್​​ ವಿಡಿಯೋದ ಜೊತೆಗೆ ತಮ್ಮ ಮುಂದಿನ ಸಿನಿಮಾ ಧಾಕಡ್​ನಲ್ಲಿ ಬರುವ ಒಂದು ಆಕ್ಶನ್​ ಸೀನ್​ ಎಷ್ಟು ಬಿಗ್​ ಬಜೆಟ್​ ಹೊಂದಿದೆ ಅನ್ನೋದನ್ನ ಹೇಳಿದ್ದಾರೆ.

ಕಂಗನಾ ರಣಾವತ್​ ತಮ್ಮ ಮುಂದಿನ ಚಿತ್ರ ಧಾಕಡ್​ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದು ಒಂದು ಸ್ಪೈ ಆಕ್ಷನ್​ ಸಿನಿಮಾ ಆಗಿದೆ. ಇದರಲ್ಲಿ ಕಂಗನಾ ಆಕ್ಷನ್​ ಸೀನ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಆಕ್ಷನ್​ ಸೀನ್​ ಚಿತ್ರೀಕರಿಸಲು ಭಾರೀ ಮೊತ್ತವನ್ನ ಚಿತ್ರತಂಡ ವ್ಯಯಿಸಿದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.

ಕಂಗನಾ ರಣಾವತ್​​ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ಶೇರ್​ ಮಾಡುವ ಮೂಲಕ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದು, ಧಾಕಡ್​ ಸಿನಿಮಾದ ಒಂದೇ ಒಂದು ಆಕ್ಷನ್​ ಸೀನ್​ಗಾಗಿ ಬರೋಬ್ಬರಿ 25 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣ ಖರ್ಚು ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಯಾವ ನಿರ್ದೇಶಕನೂ ತರಬೇತಿ ಅವಧಿಗೆ ಇಷ್ಟೊಂದು ಸಮಯ ಹಾಗೂ ಮಹತ್ವವನ್ನ ನೀಡಿದ್ದನ್ನು ನಾನು ಹಿಂದೆಂದೂ ಕಂಡೇ ಇಲ್ಲ. ನಾಳೆ ರಾತ್ರಿಯಿಂದ ಆಕ್ಷನ್​ ಸೀನ್​ ಒಂದರ ಶೂಟಿಂಗ್​ ನಡೆಯಲಿದೆ. ಆದರೆ ನಾನು ಇದರ ತಯಾರಿಯನ್ನೇ ಕಂಡೇ ಆಶ್ಚರ್ಯ ಚಕಿತಳಾಗಿದ್ದೇನೆ. ಒಂದು ಆಕ್ಷನ್​ ಸೀನ್​​ಗಾಗಿ ಬರೋಬ್ಬರಿ 25 ಕೋಟಿ ರೂಪಾಯಿ ಖರ್ಚು ಮಾಡಲಾಗ್ತಿದೆ ಎಂದು ಬರೆದುಕೊಂಡಿದ್ದಾರೆ .

— Kangana Ranaut (@KanganaTeam) February 5, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...