alex Certify ಕೇಂದ್ರ ಬಜೆಟ್​: 75 ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ತೆರಿಗೆ ವಿನಾಯಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಬಜೆಟ್​: 75 ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ತೆರಿಗೆ ವಿನಾಯಿತಿ

ಕೇಂದ್ರ ಸರ್ಕಾರದ 2021ನೇ ಸಾಲಿನ ಬಜೆಟ್​ನಲ್ಲಿ 75 ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ.

75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ರಿರ್ಟನ್ಸ್ ಸಲ್ಲಿಕೆಯಿಂದ ವಿನಾಯಿತಿ ನೀಡಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ರು.

ಈ ಘೋಷಣೆಯಿಂದಾಗಿ ಕೇವಲ ಪಿಂಚಣಿಯೊಂದನ್ನೇ ಆಧರಿಸಿದ್ದ ಹಿರಿಯ ನಾಗರಿಕರು ತೆರಿಗೆ ವಿನಾಯತಿಯ ಲಾಭವನ್ನ ಪಡೆಯಲಿದ್ದಾರೆ. ಆದರೆ ಬಹುಮೂಲ ಆದಾಯ ಹೊಂದಿರುವ ಹಿರಿಯ ನಾಗರಿಕರಿಗೆ ಈ ಸೌಲಭ್ಯ ಸಿಗೋದಿಲ್ಲ. ಅಲ್ಲದೇ ಈ ಬಾರಿಯ ಬಜೆಟ್​ನಲ್ಲಿ ಕೊರೊನಾ ಸೆಸ್​ ವಿಧಿಸಲಾಗುತ್ತದೆಯೇ ಎಂಬ ಚರ್ಚೆ ವ್ಯಾಪಕವಾಗಿ ಹರಿದಾಡಿತ್ತು. ಈ ವದಂತಿಗೆ ಕೇಂದ್ರ ಸರ್ಕಾರ ತೆರೆ ಎಳದಿದ್ದು ಈ ಬಾರಿ ಕೊರೊನಾ ಸೆಸ್​ನ್ನು ವಿಧಿಸಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...